ಲಿಂಗಸುಗೂರಲ್ಲಿ ಪ್ರತಿಭಟನಾಕಾರರಿಂದ ರಸ್ತಾರೋಕೋ ಯತ್ನ, ಬಂಧನ ಬಿಡುಗಡೆ

KannadaprabhaNewsNetwork |  
Published : Jul 23, 2026, 01:30 AM IST
22ಕೆಪಿಎಲ್ಎನ್ಜಿ02  | Kannada Prabha

ಸಾರಾಂಶ

ಲಿಂಗಸುಗೂರು ಪಟ್ಟಣದಲ್ಲಿ ಕೈಗೊಂಡ ಸಿಸಿ ರಸ್ತೆಗಳ ಅವೈಜ್ಞಾನಿಕ ಕಾಮಗಾರಿಯಿಂದ ನಾಗರೀಕರಿಗೆ ತೀವ್ರ ತೊಂದರೆಯಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮನವಿ ಸಲ್ಲಿಸಿದರೂ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ಕೂಡಲೇ ಸೂಕ್ತ ಕ್ರಮ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘಟನೆ ಪದಾಧಿಕಾರಿ, ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ ನೇತೃತ್ವದಲ್ಲಿ ಬಸ್ ನಿಲ್ದಾಣದ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ರಸ್ತಾ ರೋಕೋ ನಡೆಸಲು ಮುಂದಾದಾಗ ಪೋಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತ ಹಾಗೂ ಐಎಂಎ ರಸ್ತೆಯಲ್ಲಿ ವೇಗ ನಿಯಂತ್ರಣ ಮಾಡಲು ರಬ್ಬರ್ ಹಂಪ್ಸ್ ಹಾಕಬೇಕು, ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರ ಅಡ್ಡಾದಿಡ್ಡಿಯಾಗಿ ಚಲಿಸಿ ಅಪಘಾತಗಳು ಸಂಭಿಸುವ ಭೀತಿ ಇದೆ. ಕೂಡಲೇ ಸಂಚಾರ ಸಿಗ್ನಲ್‌ಗಳನ್ನು ಅಳವಡಿಸಬೇಕು. ಪಟ್ಟಣದಲ್ಲಿ ಕೈಗೊಂಡ ಸಿಸಿ ರಸ್ತೆಗಳ ಅವೈಜ್ಞಾನಿಕ ಕಾಮಗಾರಿಯಿಂದ ನಾಗರೀಕರಿಗೆ ತೀವ್ರ ತೊಂದರೆಯಾಗಿದೆ. ಸಂಚಾರಕ್ಕೂ ಸಮಸ್ಯೆಯಾಗಿದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದಲ್ಲಿ ರಸ್ತಾರೋಕೋ ನಡೆಸಲು ಮುಂದಾದರು ಈ ವೇಳೆ ಪೊಲೀಸರು ಅಧ್ಯಕ್ಷ ಜಿಲಾನಿ ಪಾಶಾ ಸೇರಿದಂತೆ ಮುಖಂಡರು ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಈ ವೇಳೆ ಜಿ.ಭಗೀರಥ ಸರ್ಜಾಪುರ, ರಾಜು ಯಲ್ಲಗಟ್ಟ, ಅಜೀಜ್ ಪಾಶ, ಶೇಖ ಅಜ್ಮೀರ್, ರವಿಕುಮಾರ ಬರಗುಡಿ, ಮೋಹಿನ್ ಖಾನ್, ರಾಮಣ್ಣ ನರಕಲದಿನ್ನಿ, ಅಲ್ಲಾವುದ್ದೀನ್ ಬಾಬಾ, ಮರಿಯಪ್ಪ ಹಿರೇನಗನೂರು, ಬಸನಗೌಡ, ಅಮರೇಶ, ಮಲ್ಲನಗೌಡ, ಜಮೀರ್ ಖಾನ್, ಇಲಿಯಾಸ್, ಶಬ್ಬೀರ್ ಫೂಲವಾಲೆ, ರಹೀಮಾನ, ತಿಮ್ಮಣ್ಣ ಸಾಹುಕಾರ, ಬಸನಗೌಡ ಹಿರೇಹೆಸರೂರು, ಸೋಹಾನ್, ಸಾಬು ಹುಸೇನ್, ಇಜಾಮ ಹುಸೇನ, ಮಹಾಂತೇಶ, ಕುಪ್ಪಯ್ಯ, ಪ್ರಭುಗೌಡ ಪೈದೊಡ್ಡಿ, ಪರಮಣ್ಣಪ್ಪ ಐದಬಾವಿ, ವಿರೇಶ ಐದ್ನಾಳ, ಮಹಾಂತೇಶ ಕೋಠಾ, ನನ್ನೆಸಾಬ ಐದಬಾವಿ, ಬಸವರಾಜ ಯಲಗಲದಿನ್ನಿ, ನಬೀಸಾಬ ರೋಡಲಬಂಡಾ, ಕಾಶಿಂಸಾಬ ಮರಗಂಟನಾಳ ಸೇರಿದಂತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲಾ ಮಕ್ಕಳಿಗಿಲ್ಲ ಪಠ್ಯಪುಸ್ತಕ ಭಾಗ್ಯ!
ಯುಗ್ಮಾ ಟೆಕ್‌ಫೆಸ್ಟ್- ರಾಷ್ಟ್ರಮಟ್ಟದ ಎಐ ಹ್ಯಾಕಥಾನ್‌