ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ಯತ್ನ, ಬೆಚ್ಚಿಬಿದ್ದ ಸಂಭಾಪುರ ರಸ್ತೆ ನಿವಾಸಿಗಳು

KannadaprabhaNewsNetwork |  
Published : Apr 02, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಪುಟ್ಟರಾಜ ನಗರದ ಎರಡನೇ ಹಂತದ ನಿವಾಸಿ ಕರಿಬಸಪ್ಪ ಗೋಕಾವಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು, ಹಿತ್ತಲ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಕಳ್ಳತನದ ಸದ್ದಿನಿಂದಾಗಿ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಲೈಟ್ ಹಚ್ಚಿ ಜೋರಾಗಿ ಶಬ್ದ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಜಾಗೃತಗೊಳ್ಳುತ್ತಿದ್ದಂತೆ ಗಾಬರಿಗೊಂಡ ಕಳ್ಳರು ತಾವು ತಂದಿದ್ದ ಕಬ್ಬಿಣದ ಹಾರಿ ಹಾಗೂ ಪಿಕಾಸಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಗದಗ: ನಗರದ ಸಂಭಾಪುರ ರಸ್ತೆಯ ಅಕ್ಕಪಕ್ಕದಲ್ಲಿರುವ ಕೇಶವ ಪಾರ್ಕ್, ಪುಟ್ಟರಾಜ ನಗರ 2ನೇ ಹಂತದ ಬಡಾವಣೆಗಳಲ್ಲಿ ಬುಧವಾರ ನಸುಕಿನ ಜಾವ ಮುಖಕ್ಕೆ ಮಾಸ್ಕ್ ಹಾಗೂ ಕೈಗವಸು ಧರಿಸಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳತನ ಮಾಡಲು 5 ಜನರ ಗ್ಯಾಂಗ್ ಒಂದು ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಪುಟ್ಟರಾಜ ನಗರ 2ನೇ ಹಂತದಲ್ಲಿ ಮನೆಯೊಂದರ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಪುಟ್ಟರಾಜ ನಗರದ ಎರಡನೇ ಹಂತದ ನಿವಾಸಿ ಕರಿಬಸಪ್ಪ ಗೋಕಾವಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು, ಹಿತ್ತಲ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಕಳ್ಳತನದ ಸದ್ದಿನಿಂದಾಗಿ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಲೈಟ್ ಹಚ್ಚಿ ಜೋರಾಗಿ ಶಬ್ದ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಜಾಗೃತಗೊಳ್ಳುತ್ತಿದ್ದಂತೆ ಗಾಬರಿಗೊಂಡ ಕಳ್ಳರು ತಾವು ತಂದಿದ್ದ ಕಬ್ಬಿಣದ ಹಾರಿ ಹಾಗೂ ಪಿಕಾಸಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ವೃತ್ತಿನಿರತ ಕಳ್ಳರ ಗ್ಯಾಂಗ್: ಗೋಕಾವಿ ಅವರ ಮನೆ ಮಾತ್ರವಲ್ಲದೆ, ಇದಕ್ಕೂ ಮೊದಲು ಅಕ್ಕಪಕ್ಕದ ಬಡಾವಣೆಗಳಾದ ಸಂಭಾಪುರ ರಸ್ತೆಯ ಕೇಶವ ಪಾರ್ಕ್ ಬಡಾವಣೆಯಲ್ಲಿಯೂ ಕಳ್ಳರು ಓಡಾಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ತೆರಳಿ, ಮನೆಗಳ ಕೀಲಿ ಹಾಕಿವೆಯೇ ಎಂದು ಬ್ಯಾಟರಿ ಹಾಕಿ ಪರಿಶೀಲಿಸುತ್ತಿರುವುದು. ಅತ್ಯಂತ ರಾಜಾರೋಷವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬಡಾವಣೆಗಳಲ್ಲಿ ಸಂಚರಿಸಿರುವುದು ಪತ್ತೆಯಾಗಿದೆ.

ಕಳ್ಳರು ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗವಸು ಗ್ಲೌಜ್ ಧರಿಸಿರುವುದು ಕಂಡುಬಂದಿದೆ. ಕೈಯಲ್ಲಿ ಕಬ್ಬಿಣದ ರಾಡ್ ಗಳು, ಮಚ್ಚುಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವುದು ನೋಡಿದರೆ, ಇವರು ಮಹಾರಾಷ್ಟ್ರ ಮೂಲದ ವೃತ್ತಿನಿರತ ಕಳ್ಳರಿರಬಹುದು ಎಂದು ಅಂದಾಜಿಸಲಾಗಿದೆ. ಒಂದೇ ರಾತ್ರಿ ಎರಡು ಬಡಾವಣೆಗಳಲ್ಲಿ ಕಳ್ಳರು ಸಂಚರಿಸಿರುವುದು ಮತ್ತು ಸಿಸಿ ಕ್ಯಾಮೆರಾದಲ್ಲಿ ಅವರ ಭಯಾನಕ ದೃಶ್ಯಗಳು ವೈರಲ್ ಆಗಿರುವುದು ನಿವಾಸಿಗಳ ನಿದ್ದೆಗೆಡಿಸಿದೆ.

ಸದ್ಯ ಕಳ್ಳರು ಬಿಟ್ಟು ಹೋಗಿರುವ ಕಬ್ಬಿಣದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಮಾರುತಿ ಅವರ ನೇತೃತ್ವದಲ್ಲಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು
ಲಿಂ. ಸಿದ್ಧಗಂಗಾ ಡಾ. ಶಿವಕುಮಾರ ಶ್ರೀ ಸದಾ ಸ್ಮರಣೀಯರು: ಜಗದೀಶ ಸಂಕನೂರ