ಹಾಲೇಶ್ವರ ಶರಣರು ಮಾತನಾಡಿ, ಸಮಾಜದಲ್ಲಿ ಅನಾವಶ್ಯಕವಾಗಿ ಖರ್ಚು ಮಾಡಿ ಮಾಡುವ ಮದುವೆಗಳಿಗಿಂತ ಸಾಮೂಹಿಕ ವಿವಾಹಗಳು ಉತ್ತಮ ಸಂಪ್ರದಾಯವಾಗಿದ್ದು, ಇದರಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದರು.
ಡಂಬಳ: ಹಾಲೇಶ್ವರ ಶರಣರು ಬಡವರಿಗಾಗಿ ಜಾತಿ, ಮತ, ಪಂಥ ಎನ್ನದೆ ಸರ್ವ ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಿತ್ತದೆ ಎಂದು ಕಲಕೇರಿ- ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು ತಿಳಿಸಿದರು.
ಡಂಬಳ ಹೋಬಳಿಯ ಪೇಠಾ ಆಲೂರ ಗ್ರಾಮದ ಆರಾಧ್ಯ ದೇವರಾದ ಹಾಲೇಶ್ವರ ಕೃಪಾಪೋಷಿತ ಶಿವಯೋಗಾಶ್ರಮದ 48ನೇ ಜಾತ್ರಾ ಮಹೋತ್ಸವದ ಅಂಗವಾಗಿ 9 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ನೂತನ ವಧು- ವರರಿಗೆ ಆಶೀರ್ವಚನ ನೀಡಿದ ಅವರು, ಸಾಮೂಹಿಕ ವಿವಾಹಗಳಿಂದ ಜನರು ಸಾಮರಸ್ಯದಿಂದ ಬದುಕುವುದಕ್ಕೆ ಪ್ರೇರೇಪಿಸುತ್ತವೆ ಎಂದರು.ಹಾಲೇಶ್ವರ ಶರಣರು ಮಾತನಾಡಿ, ಸಮಾಜದಲ್ಲಿ ಅನಾವಶ್ಯಕವಾಗಿ ಖರ್ಚು ಮಾಡಿ ಮಾಡುವ ಮದುವೆಗಳಿಗಿಂತ ಸಾಮೂಹಿಕ ವಿವಾಹಗಳು ಉತ್ತಮ ಸಂಪ್ರದಾಯವಾಗಿದ್ದು, ಇದರಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯವಾಗುತ್ತದೆ. ನೂತನ ವಧು-ವರರು ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ, ಸಹನೆ ಮತ್ತು ಪ್ರೀತಿ ಅತ್ಯಂತ ಮುಖ್ಯವಾಗಿದ್ದು, ಕುಟುಂಬ ಮತ್ತು ಸಮಾಜದ ಮೌಲ್ಯಗಳನ್ನು ಉಳಿಸಿಕೊಂಡು ಬದುಕಬೇಕು ಎಂದು ನೂತನ ವಧು- ವರರಿಗೆ ಸಲಹೆ ನೀಡಿದರು.
ವಿರುಪಾಪುರದ ಅಭಿನವ ಮುದುಕೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜಾತ್ರಾ ಮಹೋತ್ಸವ, ಧಾರ್ಮಿಕ ಸಭೆಗಳು, ಕಡುಬಡವರಿಗೆ ಆಯೋಜಿಸುವ ಸಾಮೂಹಿಕ ಮದುವೆಗಳಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಸಮಾನತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಕಾರ್ಯಕ್ರಮದಲ್ಲಿ ಪೇಠಾ ಆಲೂರ ಗ್ರಾಮದ ಹಿರಿಯರು, ಸುತ್ತಮುತ್ತಲಿನ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ಜಾತ್ರಾ ಸಮಿತಿ ಸದಸ್ಯರು ಇದ್ದರು.