ವಿಶ್ವಶಾಂತಿಯ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ಚರ ಜಾತ್ರೋತ್ಸವ ಯಶಸ್ವಿಗೊಳಿಸಬೇಕು
ರಾಣಿಬೆನ್ನೂರು: ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಮನುಜನಿಗೆ ಆಸ್ತಿ, ಅಂತಸ್ತು, ಹಣ ಎಲ್ಲವೂ ಇದೆ. ಆದರೆ, ಶಾಂತಿ, ನೆಮ್ಮದಿ, ಸಮಾಧಾನ, ಸಹನೆ ಮಾತ್ರ ಇಲ್ಲವಾಗಿವೆ. ಇವುಗಳನ್ನು ಪಡೆಯಬೇಕಾದರೆ ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಹೊರವಲಯದ ಹಿರೇಮಠ ಶನೇಶ್ವರ ಸ್ವಾಮಿಯ ಮಂದಿರದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮಹೋತ್ಸವದ ಪ್ರಯುಕ್ತ ವಿಶ್ವಶಾಂತಿ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಡೆದ ಪ್ರವಚನದಲ್ಲಿ ಭಾಗವಹಿಸಿ ಮಾತನಾಡಿದರು.ವಿಶ್ವಶಾಂತಿಯ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ಚರ ಜಾತ್ರೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಬ್ರಹನ್ಮಠ ನಿಚ್ವವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮಿಗಳು ಮಾತನಾಡಿ, ಕಳೆದ ೧೨ ವರ್ಷಗಳಿಂದ ಶನೇಶ್ಚರ ಮಂದಿರದಲ್ಲಿ ಅನೇಕ ದಾಖಲೆಗಳಂತಹ ಕಾರ್ಯಕ್ರಮಗಳನ್ನು ಮಂದಿರದ ಶಿವಯೋಗಿ ಶ್ರೀಗಳು ಮುನ್ನಡೆಸುತ್ತ ಬಂದಿದ್ದು, ಈ ವರ್ಷ ನಡೆಯುವ ಶನೈಶ್ಚರಸ್ವಾಮಿಯ ಜಾತ್ರೆ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದರು. ಶಾಸ್ತ್ರಿಗಳು, ವಟುಗಳು ಸೇರಿದಂತೆ ಭಕ್ತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.