ಸಮುದಾಯಗಳನ್ನು ಸಾಹಿತ್ಯ ಪರಿಷತ್ತಿನೆಡೆಗೆ ಸೆಳೆಯಿರಿ

KannadaprabhaNewsNetwork | Published : Jul 8, 2024 12:30 AM

ಸಾರಾಂಶ

ಎಲ್ಲಾ ಸಮುದಾಯಗಳನ್ನು ಕನ್ನಡದೆಡೆ ಸೆಳೆಯುತ್ತಾ ಎಲ್ಲರೊಳಗೊಂದಾಗಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಎಲ್ಲಾ ಸಮುದಾಯಗಳನ್ನು ಕನ್ನಡದೆಡೆ ಸೆಳೆಯುತ್ತಾ ಎಲ್ಲರೊಳಗೊಂದಾಗಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸಾಪ ತಾಲೂಕು ಮಟ್ಟದ ಅಜೀವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ವೈದ್ಯ, ವಕೀಲ, ನೌಕರ, ವಿದ್ಯಾರ್ಥಿ, ಶ್ರಮಿಕ, ವ್ಯಾಪಾರಿ ಒಳಗೊಂಡಂತೆ ಎಲ್ಲಾ ನಾಗರೀಕ ಸಮುದಾಯಗಳನ್ನು ಸಾಹಿತ್ಯ ಪರಿಷತ್ತಿನೆಡೆ ಸೆಳೆಯುವ ಮೂಲಕ ಪರಿಷತ್ತು ವಿಸೃತವಾಗಬೇಕಾಗಿದೆ. ಸದಸ್ಯರು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಎಲ್ಲರಿಗೂ ಮುಟ್ಟಿಸಬೇಕು ಎಂದರು.

ಪಾವಗಡದ ಗಡಿನಾಡಿನಲ್ಲಿ ಕನ್ನಡ ಪ್ರೀತಿ ಹೆಚ್ಚಾಗಿದ್ದು, ನಿರಂತರವಾಗಿ ಕನ್ನಡ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿವೆ. ಇದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿರುವ ದಾನಿಗಳು ಮತ್ತು ಕನ್ನಡ ಪ್ರೇಮಿಗಳ ಕೊಡುಗೆ ಮೆಚ್ಚುವಂತದ್ದಾಗಿದೆ. ಸುವರ್ಣ ಕರ್ನಾಟಕ ಜಾಗೃತಿ ಜಾಥದ ರಥವು ಜು.೨೨ ರಂದು ತಾಲೂಕಿಗೆ ಪ್ರವೇಶಿಸುತ್ತಿದ್ದು, ವಿದ್ಯಾರ್ಥಿ, ಶಿಕ್ಷಕರು ಭಾಗವಹಿಸಬೇಕು ಎಂದು ವಿನಂತಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕಟ್ಟ ನರಸಿಂಹಮೂರ್ತಿ ಮಾತನಾಡಿ, ತಾಲೂಕು ಸಾಹಿತ್ಯ ರಚನೆಯಲ್ಲಿ ಹಿಂದೆ ಉಳಿದಿಲ್ಲ. ಇಲ್ಲಿಯೂ ಹಲವು ಸಾಹಿತ್ಯ ಚೇತನಗಳಿದ್ದು, ಮುಂದಿನ ಜಿಲ್ಲಾ ಸಮ್ಮೇಳನಗಳ ಅಧ್ಯಕ್ಷತೆಯ ಅವಕಾಶ ತಾಲೂಕಿನವರಿಗೆ ಸಿಗುವಂತಾಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿರುವ ಮರಣ ಹೊಂದಿರುವ ಸದಸ್ಯರ ಹೆಸರುಗಳನ್ನು ಪಟ್ಟಿ ಮಾಡಲಾಯಿತು. ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಯೋಗೀಶ್ವರಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಕಂಟಲಕೆರೆ ಸಣ್ಣಹೊನ್ನಯ್ಯ, ಹಿರಿಯ ಸಾಹಿತಿ ಅಂತರಗಂಗೆ ಶಂಕರಪ್ಪ, ಬ್ಯಾಡನೂರು ಚನ್ನಬಸವಣ್ಣ, ತಾಲೂಕು ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಹೋಬಳಿ ಘಟಕಗಳ ಅಧ್ಯಕ್ಷ ಹೊ.ಮ.ನಾಗರಾಜು, ಚಂದ್ರಶೇಖರ ಮುದ್ರಾಡಿ, ಬೊಮ್ಮಣ್ಣ, ವಿಶ್ವನಾಥ, ಕಮಲ್‌ಬಾಬು, ಇ.ಜಯರಾಮಪ್ಪ, ಶಂಕರಪ್ಪ, ಕೃಷ್ಣಕುಮಾರ, ಇರ್ಫಾನ್ ಇದ್ದರು.

Share this article