ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಮೈಸೂರು ಲಿಟರರಿ ಫೆಸ್ಟ್‌ನಲ್ಲಿ ನಡೆದ ಅಂತರ್ಜಾಲ ಯುಗದಲ್ಲಿ ಸಂಬಂಧಗಳ ಸುಳಿಗಳು ಕುರಿತ ಗೋಷ್ಠಿಯಲ್ಲಿ ಅವರು ತಮ್ಮ ನಾತಿಚರಾಮಿ ಕಾದಂಬರಿ ಕುರಿತು ಮಾತನಾಡಿದರು.
ಸಮಾಜದಲ್ಲಿ ವಿವಾಹ ಬಂಧನವನ್ನು ನೈತಿಕ ನೆಲೆಗಟ್ಟಿನಲ್ಲಿ ರೂಪಿಸಲಾಗಿದೆ. ಗೌರಿಗೆ ಮರು ವಿವಾಹದ ಸಲಹೆ ನೀಡಿದಾಗ ಆಕೆ ಒಪ್ಪುವುದಿಲ್ಲ. ಆದರೆ, ಗೌರಿ ಹಾಗೆ ದೈಹಿಕ ಸಾಂಗತ್ಯಕ್ಕೆ ಮುಂದುವರೆದಿದ್ದು ಸರಿಯೇ? ದೈಹಿಕ ಪಾವಿತ್ರ್ಯಕ್ಕೆ ಮುಖ್ಯವಾಗಿ ಆತನನ್ನು ಮನಸ್ಸಿನಲ್ಲಿ ಮರೆಯಲು ಸಾಧ್ಯವಿಲ್ಲ ಎನ್ನುತ್ತಾಳೆ. ಆದರೆ ದೈಹಿಕ ಕರೆಗೆ ಓಗೋಡೋದು ಸರಿಯೇ, ತಪ್ಪೇ. ಕಣ್ಣಿಗೆ ಕಾಣದ ತಪ್ಪುಗಳನ್ನು ಹೆಣ್ಣಿನ ಮೇಲೆ ಹೊರಿಸಲಾಗುತ್ತದೆ. ಈ ಕಾದಂಬರಿಯಲ್ಲಿ ಗೌರಿಯ ನಡೆ ಏನಾದರೂ ಅನ್ನಿಸಬಹುದು. ಓದುವವರು ನಿರ್ಧಾರಕ್ಕೆ ಬರಬೇಕು ಎಂದರು.ಹೆಣ್ಣಿಗೆ ಅವಳ ಸಂಸಾರ ಹಾಗೂ ಮತ್ತೊಬ್ಬರ ಸಂಸಾರದ ಹೊಣೆಯನ್ನೂ ಹೇಳಿ ಗಂಡಸರನ್ನು ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗುತ್ತದೆ. ಸುರೇಶ್ವಿವಾಹಿತ, ಆದರೆ ಗೌರಿ ಒಂಟಿ. ಇಲ್ಲಿ ಯೋಚಿಸಬೇಕಿದ್ದು ಯಾರು? ಎಂದು ಅವರು ಪ್ರಶ್ನಿಸಿದರು. ಗಂಡಸರ ಮೇಲೆ ಯಾವುದೇ ಜವಾಬ್ದಾರಿ ಹಾಕದೆ ಅನ್ಯಾಯ ಮಾಡುತ್ತಿದ್ದೇವೆ ಎಂದೆನಿಸುತ್ತದೆ ಎಂದರು.
ಕದಳಿ ಕಲ್ಯಾಣ ನಾಟಕ:
ನಾಟಕಗಳನ್ನು ಬರೆಯುವಾಗ ಬರಹಗಾರರು ಕೆಲವು ಭ್ರಮೆಗಳನ್ನು ಉಂಡು, ಓದುಗರಿಗೂ ನೀಡಬೇಕಾಗುತ್ತದೆ. ಸಸ್ಯಗಳಿಗೆ ಜೀವ ಇದೆ, ಭಾವ, ಸಂಗೀತ, ನಲ್ಮುಡಿಗೆ ಸ್ಪಂದಿಸುತ್ತದೆ ಎಂದು ಹೇಳಲಾಗುತ್ತದೆ. ಈ ನಾಟಕದಲ್ಲಿ ಮರಗಳಿಗೂ ಜೀವ ಇದೆ ಎಂಬ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದೇನೆ. ಕರೆದೊಯ್ದಿದ್ದೀನಿ. ಭ್ರಮೆ ಎಂದು ತಿಳಿಯುವುದು ಅವರವರ ಸ್ವಾತಂತ್ರ್ಯ. ಇಂತಹ ಪ್ರಸಂಗ ಕನ್ನಡದ ನಾಟಕಗಳಲ್ಲಿ ಸಾಕಷ್ಟು ಬಂದಿದೆ. ಕದಳಿಯ ಜತೆ ಪ್ರೇಮ, ಕಾಮ ಬಾಂಧವ್ಯ ಆಗಿ ಆಕೆ ಫಲವತೆಯೂ ಆಗುತ್ತಾಳೆ ಎಂದು ಹೇಳಿದ್ದೇನೆ. ಗಂಡು ಮಗು ಜೊತೆಗೆ ಬಾಳೆ ಗಡ್ಡೆಯೂ ಉದರದಲ್ಲಿರುತ್ತದೆ. ಬಾಳೆ ಜೊತೆ ಸಂಕರ ಆಗಿರುತ್ತದೆ ಎಂದರು.
ಬಳಿಕ ವಸುಮತಿ ಉಡುಪ ಅವರ ಪ್ರಬಂಧಗಳ ಸಂಕಲನ ಕುರಿತು ಸಂವಾದ ನಡೆಯಿತು. ಈ ವೇಳೆ ಮಾತನಾಡಿದ ಅವರು, ವಿಷಯದ ಹಂಗಿಲ್ಲದ ಸಾಹಿತ್ಯದ ಪ್ರಕಾರ ಪ್ರಬಂಧವಿದು. ಗಂಭೀರವಲ್ಲದ ಕಾರಣ ಸುಲಲಿತ ಪ್ರಬಂಧ ಎನ್ನಲಾಗಿದೆ. ಕಾವ್ಯ- ಕುಂಚ- ಚಿತ್ರ ಪ್ರಬಂಧದಲ್ಲಿ ಸ್ವಗತ ಏಕೆ? ಅದರ ಬಾಯಲ್ಲೇ ಹೇಳಿಸಿದರೆ ಮನಸ್ಸಿಗೆ ತಟ್ಟುತ್ತದೆ ಎನಿಸಿತು. ಪ್ರಬಂಧ ಪ್ರಕಾರದಲ್ಲಿ ಇದು ಒಂದು ಹೊಸ ಪ್ರಯೋಗ ಎಂದರು.