- ಪ್ರಮುಖ ಬೀದಿಗಳಲ್ಲಿ ಮೆರವಣಿಗೆ । ಮುಂಬೈ, ಪುಣೆ, ಸೂರತ್ ಇತರೆಡೆಗಳ ಭಕ್ತರು ಭಾಗಿ - - -
ನಗರದ ಪಿ.ಬಿ. ರಸ್ತೆಯಲ್ಲಿರುವ ಅರಿಹಂತ್ ಅಪಾರ್ಟ್‌ಮೆಂರ್ಟ್‌ನಿಂದ ಆರಂಭಗೊಂಡ ಮೆರವಣಿಗೆಯು ವಸಂತ ಟಾಕೀಸ್ ರಸ್ತೆ, ಗಡಿಯಾರ ಕಂಬ ಸರ್ಕಲ್, ವಿಜಯಲಕ್ಷ್ಮೀ ರಸ್ತೆ ಮಾರ್ಗವಾಗಿ ಚೌಕಿಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ ದೇವಸ್ಥಾನದವರೆಗೆ ನಡೆಯಿತು.
ಮೆರವಣಿಗೆಯಲ್ಲಿ ದಾವಣಗೆರೆ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಮುಂಬೈ, ಪುಣೆ, ಸೂರತ್, ಅಹಮದಾಬಾದ್, ಈಚಲಕಾರಂಜಿಯಿಂದ ಆಗಮಿಸಿದ ಸಹಸ್ರಾರು ಭಕ್ತರು ಭಾಗವಹಿಸಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಹಾಕಿದರು.ರಾಜ್ಯದಲ್ಲಿ ಆಚಾರ್ಯ ರಾಜರಕ್ಷಿತ ಸೂರೀಶ್ವರ ಮಹಾರಾಜರ ಮೊದಲ ಚಾತುರ್ಮಾಸ ಇದಾಗಿದ್ದು, ದಾವಣಗೆರೆ ಜೈನ ಸಂಘ ಹಾಗೂ ಟ್ರಸ್ಟಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಚೌಕಿಪೇಟೆಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಆಚಾರ್ಯ ರಾಜರಕ್ಷಿತ ಸೂರೀಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಈ ಭವ್ಯ ಮೆರವಣಿಗೆಯಲ್ಲಿ ಶ್ರೀ ಸುಪಾರ್ಶ್ವನಾಥ ಜೈನ ಶ್ವೇತಂಬರ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ನರೇಂದ್ರ ಜೈನ್, ಉಪಾಧ್ಯಕ್ಷ ಶ್ರೇಯಾಂಸ ಸಂಘವಿ, ಕಾರ್ಯದರ್ಶಿ ವಿನೋದ್ ಜೈನ್, ಟ್ರಸ್ಟಿಗಳಾದ ಕುಂದನ್ ಮಲ್ ಜೈನ್, ಕುಮಾರ್ ಪಾಲ್ ಜೈನ್, ಮೋಹನ್ ಲಾಲ್ ಜೈನ್, ಪಾರಸ್ ಜೈನ್, ಕಿಶೋರ್ ಜೈನ್, ಗೌತಮ್ ಜೈನ್, ನಿತೇಶ್ ಜೈನ್, ಉತ್ತಮ್ ಜೈನ್, ವಿಶಾಲ್ ಜೈನ್, ಜಿತೇಂದ್ರ ಜೈನ್ ಹಾಗೂ ಸಮಾಜ ಬಾಂಧವರು, ಇತರರು ಭಾಗವಹಿಸಿದ್ದರು.
-19ಕೆಡಿವಿಜಿ35: ದಾವಣಗೆರೆಯಲ್ಲಿ ಭಾನುವಾರ ಶ್ರೀಗಳ ಚಾತುರ್ಮಾಸ ಮಂಗಳ ಪ್ರವೇಶ ಕಾರ್ಯಕ್ರಮವು ನಡೆಯಿತು.