ಕನ್ನಡ ಭಾಷೆಯ ಆತ್ಮಾಭಿಮಾನ ಜೀವಂತವಿಟ್ಟವರು ಆಟೋ ಚಾಲಕರು : ಬಸವರಾಜ್‌

KannadaprabhaNewsNetwork |  
Published : Nov 25, 2024, 01:00 AM IST
ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಭಾನುವಾರ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಅವರು ಧ್ವಜಾರೋಹಣ ನೆರವೇರಿಸಿದರು. ಪೌರಾಯುಕ್ತ ಬಸವರಾಜ್‌, ಜಗದೀಶ್‌ ಕೋಟೆ, ರಾಮೇಗೌಡ, ಉದಯ್‌ಕುಮಾರ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಐಟಿ, ಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ. ಸ್ನೇಹಿತರು, ಸಂಬಂಧಿಕರ ನಡುವೆಯೂ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಳವಾದ ಪರಿಣಾಮ ಮಾತೃ ಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದರು.

- ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಭಾನುವಾರ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ

--

- ಚಾಲಕರ ಸೇವೆ ಅವಿಸ್ಮರಣೀಯ

- ಕನ್ನಡಿಗರು ಎಂದಿಗೂ ಕನ್ನಡಕ್ಕೆ ಚ್ಯುತಿ ಬಾರುವಂತೆ ನಡೆದುಕೊಂಡಿಲ್ಲ

-₹15 ಲಕ್ಷ ವೆಚ್ಚದಲ್ಲಿ ನಗರಸಭಾದಿಂದ ಸುರಕ್ಷಿತ ಆಟೋ ನಿಲ್ದಾಣ

- ಆಟೋ ಸಂಘದ ಕಚೇರಿ ತೆರೆಯಲು ಸಹಕಾರ

- ಕನ್ನಡ ಸೇವೆಯಲ್ಲಿ ನಿರಂತರಾದಾಗ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಐಟಿ, ಬಿಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ. ಸ್ನೇಹಿತರು, ಸಂಬಂಧಿಕರ ನಡುವೆಯೂ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಳವಾದ ಪರಿಣಾಮ ಮಾತೃ ಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಭಾನುವಾರ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ನಾಡಿನಾದ್ಯಂತ ಭಾಷೆಯ ಆತ್ಮಾಭಿಮಾನವನ್ನು ಇಂದಿಗೂ ಜೀವಂತ ಇರಿಸಿರುವವರು ಆಟೋ ಚಾಲಕರು. ನೂರಾರು ಪ್ರವಾಸಿಗರು, ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಚಾಲಕರ ಸೇವೆ ಅವಿಸ್ಮರಣೀಯ ಎಂದು ತಿಳಿಸಿದರು.

ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಕನ್ನಡವನ್ನೇ ವಿಭಿನ್ನ ಶೈಲಿಯಲ್ಲಿ ಮಾತನಾಡುವುದು ಗಮನಿಸಿದ್ದೇವೆ ಎಂದ ಅವರು, ಯಾವ ಭಾಗದಲ್ಲೂ ಕನ್ನಡಿಗರು ಎಂದಿಗೂ ಕನ್ನಡಕ್ಕೆ ಚ್ಯುತಿ ಬಾರುವಂತೆ ನಡೆದುಕೊಂಡಿಲ್ಲ. ಆದರೆ ಆಧುನಿಕತೆ ಬೆಳೆದಂತೆ ಯುವ ಸಮೂಹ ಆಂಗ್ಲ ಭಾಷೆ ವ್ಯಾಮೋಹಕ್ಕೆ ಆಕರ್ಷಿತರಾಗುವುದು ಉತ್ತಮ ಬೆಳವಣಿಗೆಯಲ್ಲ ಎಂದರು.ಇತ್ತೀಚೆಗೆ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಸಮೀಪ ₹15 ಲಕ್ಷ ವೆಚ್ಚದಲ್ಲಿ ನಗರಸಭಾದಿಂದ ಸುರಕ್ಷಿತ ಆಟೋ ನಿಲ್ದಾಣ ನಿರ್ಮಿಸಿಕೊಡಲಾಗಿದೆ. ಚಾಲಕರ ಮನವಿ ಮೇರೆಗೆ ಆಟೋ ಸಂಘದ ಕಚೇರಿ ತೆರೆಯಲು ಸಹಕರಿಸುವುದಾಗಿ ಭರವಸೆ ನೀಡಿದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ. ಕನ್ನಡಾಭಿಮಾನ ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ನಾಡಿನ ಕವಿ ಸಂತರು, ದಾರ್ಶನಿಕರ ಹಾಗೂ ಭಾಷೆಯ ಇತಿಹಾಸದ ಪುಟ ಓದಿದರೆ, ನಾಡಿನ ನೈಜ ಪರಂಪರೆ ಅರಿಯಲು ಸಾಧ್ಯ ಎಂದು ತಿಳಿಸಿದರು.ಆಟೋ ಸಂಘದ ಕಾರ್ಯದರ್ಶಿ ಕೋಟೆ ಜಗದೀಶ್ ಮಾತನಾಡಿ, ನೆರೆ ರಾಜ್ಯದಂತೆ ಕನ್ನಡಿಗರು ಮಾತೃಭಾಷೆಯ ಬಗ್ಗೆ ವಿಶೇಷ ಅಭಿಮಾನ ಹೊಂದಬೇಕು. ಕನ್ನಡ ಸೇವೆಯಲ್ಲಿ ನಿರಂತರಾದಾಗ ಮಾತ್ರ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ. ಹೀಗಾಗಿ ಚಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕನ್ನಡಾಭಿಮಾನ ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಆಟೋ ಸಂಘದ ಜಿಲ್ಲಾಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಹ ಕಾರ್ಯದರ್ಶಿ ಯಶ್ವಂತ್, ನಿರ್ದೇಶಕರಾದ ಅಶ್ವಥ್, ಈಶ್ವರ್, ಚಾಲಕರಾದ ವೆಂಕಟೇಶ್, ಮಿಲ್ಟ್ರಿ ಮಂಜು, ರಾಜು ಹಾಜರಿದ್ದರು. 24 ಕೆಸಿಕೆಎಂ 3ಚಿಕ್ಕಮಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ವಂದೇ ಮಾತರಂ ಆಟೋ ನಿಲ್ದಾಣದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಭಾನುವಾರ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಪೌರಾಯುಕ್ತ ಬಸವರಾಜ್‌, ಜಗದೀಶ್‌ ಕೋಟೆ, ರಾಮೇಗೌಡ, ಉದಯ್‌ಕುಮಾರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ