ಕಳೆದ ಎರಡು ವರ್ಷಗಳಿಂದ 40 ಫಲಾನುಭವಿಗಳು ದನದ ದೊಡ್ಡಿ ನಿರ್ಮಾಣ ಮಾಡಿಕೊಂಡಿದ್ದು, ಈವರೆಗೆ ಅದರ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಒದಗಿಸಬೇಕು ಎಂದು ಆಗ್ರಹಿಸಿದರು. ಈವರೆಗೆ ವಿಬಿ ಜಿ ರಾಮ ಜಿ ಯೋಜನೆಯಡಿಯಲ್ಲಿ ಎಲ್ಲಿಯೂ ಕೆಲಸ ನಡೆದಿಲ್ಲ.
ಮುಂಡರಗಿ: ತಾಲೂಕಿನ ಹೆಸರೂರು ಗ್ರಾಮಸ್ಥರು ಕೂಲಿಕಾರರಿಗೆ ವಿಬಿ ಜಿರಾಮ ಜಿ ಯೋಜನೆಯಡಿಯಲ್ಲಿ ಉದ್ಯೋಗ ನೀಡಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ದನದ ಕೊಟ್ಟಿಗೆ ಬಾಕಿ ಹಣ ಕೊಡಬೇಕು ಎಂದು ಆಗ್ರಹಿಸಿ ಸೋಮವಾರ ಗ್ರಾಪಂ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು.ಕಳೆದ ಎರಡು ವರ್ಷಗಳಿಂದ 40 ಫಲಾನುಭವಿಗಳು ದನದ ದೊಡ್ಡಿ ನಿರ್ಮಾಣ ಮಾಡಿಕೊಂಡಿದ್ದು, ಈವರೆಗೆ ಅದರ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಒದಗಿಸಬೇಕು ಎಂದು ಆಗ್ರಹಿಸಿದರು. ಈವರೆಗೆ ವಿಬಿ ಜಿ ರಾಮ ಜಿ ಯೋಜನೆಯಡಿಯಲ್ಲಿ ಎಲ್ಲಿಯೂ ಕೆಲಸ ನಡೆದಿಲ್ಲ. ಇದೀಗ ಬರಗಾಲವಿರುವುದರಿಂದ ಕೂಡಲೇ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೇಟಿ ನೀಡಿ ವಿಬಿ ಜಿ ರಾಮ ಜಿ ಉದ್ಯೋಗಕ್ಕೆ 20 ದಿನಗಳಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಅದರಂತೆ ಕೆಲಸ ಕೊಡುವದಾಗಿ ಹಾಗೂ ಬಾಕಿ ಇರುವ ದೊಡ್ಡಿ ನಿರ್ಮಾಣದ ಹಣವನ್ನು ಸಹ ಒಂದು ವಾರದೊಳಗೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ರಂಗನಾಥ ನಾಯಕ, ಗುಡದಪ್ಪ ದೇಸಾಯಿ, ಶಂಕ್ರಪ್ಪ ಹಲಗಿ, ದೇವಪ್ಪ ಹಲವಾಗಲಿ, ಶರಣಪ್ಪ ಸಿಂಗಾಡಿ, ಸುಭಾಸ ತಂಟ್ರಿ, ಕೋಟೆಪ್ಪ ಹಲವಾಗಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ನಾಳೆ ವಿಶ್ವ ಜಿನೇವಾ ಒಪ್ಪಂದ ದಿನಾಚರಣೆಗದಗ: ಆ. 12ರಂದು ಬೆಳಗ್ಗೆ 11ಕ್ಕೆ ನಗರದ ರೆಡ್‌ಕ್ರಾಸ್ ಭವನದಲ್ಲಿ ವಿಶ್ವ ಜಿನೇವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮ ಜರುಗಲಿದೆ. ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮಿಗಳ ಸಾನ್ನಿಧ್ಯವನ್ನು ಹಾಗೂ ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ಅವರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಎಸ್. ಪಾಟೀಲ ಅವರ 92ನೇ ಜನ್ಮದಿನ ಹಾಗೂ ಮುಂಡರಗಿ ತಾಲೂಕು ಕಲಕೇರಿ ಗ್ರಾಮದ ಮಾಜಿ ಟಿಡಿಬಿ ಅಧ್ಯಕ್ಷ ದಿವಂಗತ ಮುದಕನಗೌಡ ಬಿ. ಪಾಟೀಲ ಅವರ ಪುಣ್ಯಸ್ಮರಣೆ ನಿಮಿತ್ತ ಅಂಗವಿಕಲರಿಗೆ ಸಾಧನ ಸಲಕರಣೆಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಲ್ಸ್ ಆಕ್ಸಿಮೀಟರ್ ವಿತರಿಸಲಾಗುವುದು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಎಂಜಿಆರ್‌ಡಿಪಿಆರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ನಾಡಗೌಡರ ಹಾಗೂ ರಿಜಿಸ್ಟ್ರಾರ್ ಡಾ. ಅಮರೇಶ ಯತಗಲ್ ಅವರನ್ನು ಸನ್ಮಾನಿಸಲಾಗುವುದು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್ಪಿ ರೋಹನ್ ಜಗದೀಶ್, ಡಿಎಫ್‌ಒ ಸಂತೋಷಕುಮಾರ ಕೆಂಚಪ್ಪನವರ, ಕೆಎಚ್‌ಪಿಎಲ್‌ಎಂಎಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಎಡಿಸಿ ಡಾ. ದುರುಗೇಶ ಕೆ.ಆರ್. ಇತರರು ಪಾಲ್ಗೊಳ್ಳುವರು ಎಂದು ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಎಂ.ಡಿ. ಸಮುದ್ರಿ ತಿಳಿಸಿದ್ದಾರೆ.