ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ವಿವೇಕಾನಂದ ಜೋಡಿ ರಸ್ತೆಯ ಬಾಲಭವನ ಆಟೋ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ನಾಡು ನುಡಿ ಹೋರಾಟಗಳಲ್ಲಿ ಆಟೋ ಚಾಲಕರು ಸದಾ ಸಕ್ರಿಯವಾಗಿದ್ದಾರೆ. ಅವರ ಜಾಗೃತಿಯಿಂದಲೆ ಪರಭಾಷಿಕರು ಸಹ ಕನ್ನಡ ಕಲಿತು ಕನ್ನಡದಲ್ಲೆ ವ್ಯವಹರಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರುನಾಡ ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿದರು. ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ. ಆಟೋ ಘಟಕದ ವೆಂಕಟೇಶ್ ಸೋಮಶೇಖರ, ಮುದ್ದೇಗೌಡ, ವಿಜಯಕುಮಾರ್, ಶಿವಲಿಂಗು, ರಾಮಲಿಂಗಯ್ಯ, ಪುನೀತಾ, ಪ್ರವೀಣ್, ಪ್ರಕಾಶ್ ಉಪಸ್ಥಿತರಿದ್ದರು.ಇದೇ ವೇಳೆ ನ್ಯಾಷನಲ್ ಚಿಲ್ಡ್ರನ್ ಶಾಲೆ ಹಾಗೂ ಸಾತನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.
ಕಿಕ್ಕೇರಿ:
ಪಟ್ಟಣದ ವಿನಾಯಕ ಒಮ್ನಿ ಮಾಲೀಕರ ಹಾಗೂ ಚಾಲಕರ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾಷೆಗೆ ಮುಪ್ಪಿಲ್ಲ. ಬಳಸುವ ನಮಗೆ ಮುಪ್ಪು, ಸಾವು ಎಲ್ಲವೂ ಇದೆ. ನಟ ಶಂಕರನಾಗ್ ಅಭಿಮಾನಿಗಳಾಗಿ ಅಂದು ಕನ್ನಡ ಪ್ರೇಮ ತೋರಿದ ಶಂಕರನಾಗ್ ಆಶಯವನ್ನು ಉಳಿಸಿಕೊಂಡು ಹೋಗುತ್ತಿರುವ ಚಾಲಕರೇ ಕನ್ನಡದ ನಿಜವಾದ ಅಭಿಮಾನಿಗಳು ಎಂದು ಪ್ರಶಂಸಿದರು.
ಕನ್ನಡಾಂಭೆ ಧ್ವಜ ಹಾರಿಸಿ, ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಿಹಿ ತಿನಿಸು ವಿತರಿಸಿ ಕನ್ನಡ ಭಾಷಿಕರ ಪ್ರೀತಿ ಮೆರೆಯಲಾಯಿತು. ಅನೆಗೊಳ ರಘು, ಅಂಚೆಬೀರನಹಳ್ಳಿ ಅನಂತ್, ದಡದಹಳ್ಳಿ ಮೋಹನ, ಗೂಡೆಹೊಸಹಳ್ಳಿ ರವಿ, ಗೌಡೇನಹಳ್ಳಿ ಬಸವರಾಜು, ಗಂಗೇನಹಳ್ಳಿ ಅನಂತ, ತುಳಸಿ ಶೇಖರ, ಸೊಳ್ಳೇಪುರ ಹನುಮಂತ, ಫತಾರಾಂ, ಜೇಟುಸಿಂಗ್, ಕೆ.ಪಿ.ಮಂಜುನಾಥ್ ಇದ್ದರು.