ಮದ್ದೂರು: ಸಾರಿಗೆ ಬಸ್ ಪ್ರಯಾಣಿಕರ ಆಪೇ ಆಟೋಗೆ ಡಿಕ್ಕಿ ಹೊಡೆದು ಆಟೋ ಉರುಳಿ ಬಿದ್ದ ಪರಿಣಾಮ ಮಹಿಳೆಯರು ಸೇರಿದಂತೆ ಆರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಬಳಿ ಭಾನುವಾರ ಮಧ್ಯಾಹ್ನ ಜರುಗಿದೆ.
ಎಲ್ಲರೂ ಮದ್ದೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಬೆಂಗಳೂರು- ಮೈಸೂರು ಹಳೆಯ ಹೆದ್ದಾರಿಯ ಕೆಸ್ತೂರ್ ಕ್ರಾಸ್ ಅಡಿಗಾಸ್ ಹೋಟೆಲ್ ಬಳಿ ಬಸ್ ಚಾಲಕ ಮದ್ದೂರಿಗೆ ತೆರಳಲು ಬಲಕ್ಕೆ ತಿರುಗಿಸುವ ಭರದಲ್ಲಿ ಸೋಮನಹಳ್ಳಿ ಕಡೆಯಿಂದ ಬರುತ್ತಿದ್ದ ಪ್ರಯಾಣಿಕರ ಆಪೇ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಈ ಸಂಬಂಧ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಬಾಕ್ಸ್..........
ಸಾರಿಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರಿದ್ದ ಆಪೇ ಆಟೋ ಉರುಳಿ ಬಿದ್ದಾಗ ಕಾರ್ಯ ನಿಮ್ಮಿತ್ತ ಮದ್ದೂರಿಗೆ ತೆರಳುತ್ತಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅವರು ತಕ್ಷಣ ಉರುಳಿ ಬಿದ್ದಿದ್ದ ಆಟೋವನ್ನು ಸ್ಥಳೀಯರ ನೆರವಿನಿಂದ ಎತ್ತಿ ನಿಲ್ಲಿಸಿದರು. ಅಲ್ಲದೇ, ತಮ್ಮ ಕಾರಿನಲ್ಲಿಯೇ 6 ಮಂದಿ ಗಾಯಾಳುಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮೂಲಕ ಬಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ.
ಕೋಟ್............
- ಎಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕರು