)
ಆಪೇ ಆಟೋ ಟಿಪ್ಪರ್ ನಡುವೆ ಡಿಕ್ಕಿ । ಹೆದ್ದಾರಿ 44ರ ದೊಡ್ಡ ಪೇಯಲಗುರ್ಕಿ ಬಳಿ ಘಟನೆ
ಆಪೇ ಆಟೋ ಮತ್ತು ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ ಆಟೋ ಡ್ರೈವರ್ ಸ್ಥಳದಲ್ಲೇ ಮೃತನಾದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೊಡ್ಡ ಪೇಯಲಗುರ್ಕಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಮೃತ ಆಟೋ ಚಾಲಕನನ್ನು ಪೆರೇಸಂದ್ರ ಗ್ರಾಮದ 58 ವರ್ಷದ ವೆಂಕಟೇಶ್ ಎಂದು ಗುರುತಿಸಲಾಗಿದೆ.ಮೃತ ವೆಂಕಟೇಶ್ ತನ್ನ ಪತ್ನಿ ಮಂಜುಳಾ ಜೊತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ತರಲು ತನ್ನ ಆಪೇ ಆಟೋದಲ್ಲಿ ಪೆರೇಸಂದ್ರ ಗ್ರಾಮದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದಾಗ ರಾಷ್ಟ್ರೀಯ ಹದ್ದಾರಿ 44ರ ದೊಡ್ಡ ಪೇಯಲಗುರ್ಕಿ ಗ್ರಾಮದ ಬಳಿ ಹಿಂದಿನಿಂದ ಟಿಪ್ಪರ್ ಲಾರಿ ಗುದ್ದಿದೆ. ಅಪಘಾತದ ರಭಸಕ್ಕೆ ವೆಂಕಟೇಶ್‌ಗೆ ಗಂಭೀರ ಗಾಯವಾಗಿದೆ. ಆದರೆ ಪತ್ನಿ ಮಂಜುಳಾಗೆ ಸಣ್ಣಪುಟ್ಟ ಗಾಯಗಳಾಗಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.