ಆಟೋಚಾಲಕರು ನಮ್ಮ ಸಹೋದರರು: ಎಸ್.ಸಚ್ಚಿದಾನಂದ

KannadaprabhaNewsNetwork |  
Published : Nov 07, 2026, 01:45 AM IST
6ಕೆಎಂಎನ್ ಡಿ15 | Kannada Prabha

ಸಾರಾಂಶ

ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು 3 ರಿಂದ 4 ವರ್ಷ ಜನ ಸಂಪರ್ಕದಿಂದ ದೂರವೇ ಉಳಿದು ಮತ್ತೆ ಚುನಾವಣಾ ವರ್ಷದಲ್ಲೇ ಜನರ ಸಂಪರ್ಕಕ್ಕೆ ಬರುತ್ತಾರೆ. ಆದರೆ, ಯುವ ಮುಖಂಡ ಎಸ್.ಸಚ್ಚಿದಾನಂದ ಚುನಾವಣಾ ಫಲಿತಾಂಶದ ದಿನದಿಂದಲೂ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಯಾವುದೇ ರಾಜಕೀಯ ಪ್ರತಿಫಲ ಅಪೇಕ್ಷೆ ಇಲ್ಲದೇ ಆಟೋ ಚಾಲಕರಿಗೆ ನಮ್ಮ ಸಹೋದರರು ಎಂಬ ಭಾವನೆಯಿಂದ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಹೇಳಿದರು.

ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹುಟ್ಟುಹಬ್ಬದಾಚರಣೆ ಪ್ರಯುಕ್ತ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಶ್ರೀರಂಗಪಟ್ಟಣದ ಐತಿಹಾಸಿಕ, ಪಾರಂಪರಿಕತೆಯನ್ನೂ, ಪ್ರವಾಸೋದ್ಯಮವನ್ನು ಪ್ರಸಿದ್ಧಗೊಳಿಸುವಲ್ಲಿ ನಿಮ್ಮ ಸೇವೆ ಅನನ್ಯ. ಬಿಸಿಲು, ಮಳೆ, ಚಳಿ ಎನ್ನದೆ, ಹಗಲು- ರಾತ್ರಿ ಶ್ರಮಿಸುವ ನೀವು, ಜನರ ಪ್ರಯಾಣದ ಜತೆಗೆ ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಪ್ರತಿದಿನ ರಸ್ತೆಯಲ್ಲೇ ಬದುಕನ್ನು ಸವೆಸುವ ನಿಮ್ಮ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಬೆಲೆ ಏರಿಕೆ, ಮೂಲ ಸೌಕರ್ಯ ಕಲ್ಪಿಸುವಂತಹ ಸಾಕಷ್ಟು ಏರಿಳಿತಗಳ ಸಮಸ್ಯೆಗಳ ನಡುವೆ ಕುಟುಂಬಗಳಿಗೆ ಆಧಾರ ಸ್ಥಂಭವಾಗಿದ್ದೀರಿ. ನಿಮ್ಮಂಥ ಶ್ರಮಜೀವಿಗಳ ಕಷ್ಟವನ್ನು ಗುರುತಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹುಟ್ಟುಹಬ್ಬದಂದು ಆಹಾರ ಕಿಟ್ ವಿತರಿಸುವ ಮೂಲಕ ಅಲ್ಪ ಪ್ರಮಾಣದ ನೆರವು ನೀಡುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ ಎಂದರು.

ಅಧಿಕಾರ ಇರಲಿ, ಇಲ್ಲದಿರಲಿ, ಸಾಕಷ್ಟು ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾನು ನಡೆಸಿಕೊಂಡು ಬಂದಿದ್ದೇನೆ. ನಿಮ್ಮ ಹಾಗೂ ನಮ್ಮ ಕ್ಷೇತ್ರದ ಜನರ ಪ್ರೀತಿ, ಬೆಂಬಲ ನನ್ನನ್ನು ಸಶಕ್ತನನ್ನಾಗಿಸಿದೆ ಎಂದು ತಿಳಿಸಿದರು.

ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು 3 ರಿಂದ 4 ವರ್ಷ ಜನ ಸಂಪರ್ಕದಿಂದ ದೂರವೇ ಉಳಿದು ಮತ್ತೆ ಚುನಾವಣಾ ವರ್ಷದಲ್ಲೇ ಜನರ ಸಂಪರ್ಕಕ್ಕೆ ಬರುತ್ತಾರೆ. ಆದರೆ, ಯುವ ಮುಖಂಡ ಎಸ್.ಸಚ್ಚಿದಾನಂದ ಚುನಾವಣಾ ಫಲಿತಾಂಶದ ದಿನದಿಂದಲೂ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಸಚ್ಚಿದಾನಂದ ಅವರು ನಿರಂತರವಾಗಿ ಸಮಾಜಮುಖಿ, ಧಾರ್ಮಿಕ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಸೇರಿದಂತೆ ಸಾಕಷ್ಟು ನೆರವುಗಳನ್ನು ನೀಡಿ ಜನಮನ ಗೆದ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಯುವ ನಾಯಕ ಇನ್ನಷ್ಟು ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ದಸರಾ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಕಿತ್ತೂರು ರಾಣಿ ಕಪ್ ಮೂಲಕ ರಾಜ್ಯ ಪ್ರಶಸ್ತಿ ಗಳಿಸಿದ ಮೇಳಾಪುರ ಗ್ರಾಮದ ಕುಮಾರಿ ಬಿ.ಚೈತನ್ಯಶ್ರೀ ಹಾಗೂ ಹಾಸನದ ಸಮಾಜ ಸೇವಕ ಸಾಗರ್ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೈ.ಮಹದೇವು, ನಗರ ಬಿಜೆಪಿ ಘಟಕದ ಅಧ್ಯಕ್ಷ ಸುಧಾಕರ್, ಹಿರಿಯ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಎಸ್.ಎಲ್.ಲಿಂಗರಾಜು, ಕೆ.ಆರ್‌ಎಸ್ ರಾಮೇಗೌಡ, ಶಾಮಿಯಾನ ಪುಟ್ಟರಾಜು, ಪಾಲಹಳ್ಳಿ ಶಂಕರ್, ಪುರಸಭಾ ಮಾಜಿ ಸದಸ್ಯರಾದ ಎಸ್.ಟಿ.ರಾಜಣ್ಣ, ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ.ರಾಜು, ಕಂಠಿ ರಘು, ಯುವ ಮುಖಂಡ ದರ್ಶನ್ ಲಿಂಗರಾಜು, ಪ್ರಭಾಕರ್ ಗುಪ್ತಾ, ಎಸ್ಸಿ ಮೋರ್ಚಾ ಅಧ್ಯಕ್ಷ ಯತೀರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸ, ಯುವಮೋರ್ಚಾ ಅಧ್ಯಕ್ಷ ಸಚಿನ್ ಇತರರು ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ