ಡಿವೈಡರ್ ಅಳವಡಿಸಿ ಅಪಘಾತ ತಪ್ಪಿಸಿ

KannadaprabhaNewsNetwork |  
Published : Nov 06, 2024, 11:48 PM IST
ಲೋಕಾಪುರ | Kannada Prabha

ಸಾರಾಂಶ

ಬಸವೇಶ್ವರ ವೃತ್ತದಿಂದ ಯಾದವಾಡ ರಸ್ತೆ ಶಿವಾಜಿ ವೃತ್ತದವರೆಗೆ ನಿರ್ಮಿಸಿದ ರಸ್ತೆ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಿಲ್ಲ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದಿಂದ ಹಾದು ಹೋಗುವ ಮುಧೋಳ-ಬಾಗಲಕೋಟೆ, ಧಾರವಾಡ-ವಿಜಯಪುರ ಮಧ್ಯಭಾಗದಲ್ಲಿ ಡಿವೈಡರ್ ಇಲ್ಲದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಡಿವೈಡರ್ ಅಳವಡಿಸಿ ಅನಾಹುತ ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಬಸವೇಶ್ವರ ವೃತ್ತದಿಂದ ಯಾದವಾಡ ರಸ್ತೆ ಶಿವಾಜಿ ವೃತ್ತದವರೆಗೆ ನಿರ್ಮಿಸಿದ ರಸ್ತೆ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಿಲ್ಲ. ಹೀಗಾಗಿ ಬೈಕ್‌ ಸವಾರರು ರಸ್ತೆ ನಿಯಮ ಪಾಲಿಸದೇ ಅತೀ ವೇಗದಿಂದ ವಾಹನಗಳನ್ನು ಓಡಿಸುತ್ತಿರುವುದರಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿವೆ.

ಬಸ್ ನಿಲ್ದಾಣ ಎದುರಿಗೆ ನಿರ್ಮಿಸಿದ ರಸ್ತೆ ಇಕ್ಕಟ್ಟಾಗಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಪಕ್ಕದಲ್ಲಿ ಟೀ ಪಾಯಿಂಟ್, ಹಣ್ಣಿನ ಅಂಗಡಿ, ಹೋಟೆಲ್, ಪಪಂ ಹಾಗೂ ಲೋಕೋಪಯೋಗಿ ಇಲಾಖೆ ಅನಧಿಕೃತ ಪರವಾನಗಿ ನೀಡಿದ್ದರಿಂದ ವಾಹನಗಳ ಸಂಚಾರ ಸುಗಮವಾಗಿ ಆಗದೇ ಆಗಾಗ ವಾಹನಗಳ ಚಾಲಕರು ಮತ್ತು ಅಂಗಡಿ ಮಾಲೀಕರ ಮಧ್ಯೆ ವಾಗ್ವಾದಗಳು ನಡೆಯುತ್ತಲೇ ಇರುತ್ತವೆ.

ಪೊಲೀಸ್‌ ಸ್ಟೇಷನ್‌ದಿಂದ ಬಾಗಲಕೋಟೆ ರಸ್ತೆಯವರೆಗೆ ಒಂದು ರಸ್ತೆಯ ಒಂದು ಭಾಗದ ನಿರ್ಮಾಣ ಕಾರ್ಯ ೨-೩ ವರ್ಷಗಳಿಂದ ಸ್ಥಗಿತಗೊಳಿಸಿದ್ದಾರೆ. ಏಕೆ ಅಂತಾ ಕೇಳಿದರೇ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸದೇ ಗುತ್ತಿಗೆದಾರರು ಮತ್ತೊಂದು ಕಡೆ ಕಾಮಗಾರಿ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ರಸ್ತೆ, ಚರಂಡಿ, ಡಿವೈಡರ್ ಅಳವಡಿಕೆ, ರಸ್ತೆ ಕಾಮಗಾರಿ ಮಾಡದೇ ಗುತ್ತಿದಾರರು ತಮಗಿಷ್ಟ ಬಂದ ಹಾಗೆ ಮಾಡುತ್ತಿದ್ದಾರೆಂದು ಸಾರ್ವಜನಿಕರ ಆರೋಪ.

ಸುಮಾರು ೨ ವರ್ಷಗಳಿಂದ ಚರಂಡಿ, ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಮಧ್ಯದಲ್ಲಿ ಡಿವೈಡರ್ ಅಳವಡಿಸಬೇಕು ಎಂದು ಸಾರ್ವಜನಿಕರ ಒತ್ತಾಯ.ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸಿ ವಾಹನಸವಾರರಿಗೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ನಡೆದಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಕೆಲಸವನ್ನು ಬೇಗನೆ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ವಿಳಂಬ ಧೋರಣೆ ತಾಳಲಾರದೆ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟಿಸಬೇಕಾಗುತ್ತದೆ.

ಅರುಣ ನರಗುಂದ, ಸ್ಥಳೀಯರು

ಈ ಕಾಮಗಾರಿ ಮಾಡಲು ಹಣ ಮೀಸಲಿದ್ದು, ಪಟ್ಟಣ ಪಂಚಾಯತಯವರು ಬಸವೇಶ್ವರ ವೃತ್ತದಿಂದ, ಶಿವಾಜಿ ವೃತ್ತ, ಬಾಗಲಕೋಟೇ ರಸ್ತೆಯ ಬ್ರಿಡ್ಜವರೆಗೆ ಅತಿಕ್ರಮಣ ಕಟ್ಟಗಳನ್ನು ತೆರವುಗೊಳಿಸಿದರೆ ಕಾಮಗಾರಿಯನ್ನು ಪುನ: ಪ್ರಾರಂಭಿಸಲಾಗುವುದು.

ಚನ್ನಬಸವ ಮಾಚನೂರ, ಎಇಇ, ಮುಧೋಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ