ಕನ್ನಡಪ್ರಭ ವಾರ್ತೆ ಚಿತ್ತಾಪುರ
ದಿಗ್ಗಾಂವ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ೧೯೮೨, ಹಾಗೂ ೨೦೦೫ರಲ್ಲಿ ಎರಡು ಬಾರಿ ಗ್ರಾಮದಿಂದ ಅಲ್ಟ್ರಾಟೇಕ್ ಕಂಪನಿಯವರು ಜಮೀನು ಖರೀದಿ ಮಾಡಿದ್ದು ಕಂಪನಿಯು ಸಿ.ಎಸ್.ಆರ್ ಅಡಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಮಾಡಿಲ್ಲ. ಇದರಿಂದ ಗ್ರಾಮದಲ್ಲಿ ಹಲವಾರು ಮೂಲ ಸೌಲಭ್ಯಗಳನ್ನು ಎದುರಿಸುತ್ತಿದೆ. ಅಲ್ಲದೇ ಗ್ರಾಮದಿಂದ ಮಳಖೇಡಕ್ಕೆ ತೆರಳಲು ಸೂಕ್ತ ರಸ್ತೆ ಸಂಪರ್ಕ ಇಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.ಈ ಬಾರಿ ಅಂತಹ ತಪ್ಪುಗಳು ಆಗದಂತೆ ತಡೆಯಬೇಕು ಮತ್ತು ರೈತರು ನೀಡುವ ಜಮೀನುಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಮತ್ತು ಜಮೀನು ನೀಡುವ ಪ್ರತಿ ರೈತರ ಕುಟುಂಬಕ್ಕೆ ಒಬ್ಬರಿಗೆ ಉದ್ಯೊಗ, ಜಮೀನು ನೀಡಿದ ರೈತರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು, ಗ್ರಾಮವನ್ನು ದತ್ತು ಪಡೆದುಕೊಂಡು ಮೂಲ ಸೌಲಭ್ಯವನ್ನು ಕಲ್ಪಿಸಬೇಕು ಗ್ರಾಮಸ್ಥರ ಆರೊಗ್ಯ ಕಾಪಾಡುವ ಹಿನ್ನಲೆಯಲ್ಲಿ ಪರಿಸರ ಮಾಲಿನ್ಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ, ಗ್ರಾಮಸ್ಥರಾದ ಸಿದ್ದಣಗೌಡ ಪೊಲೀಸ್ ಪಾಟಿಲ್, ಚನ್ನವೀರ ಕಣಗಿ, ಶ್ರೀಶೈಲ್ ಪಾಟೀಲ್, ಶ್ರೀಮಂತ ಗುತ್ತೆದಾರ, ಶಾಮರಾಯ ಸಂಗಾವಿ, ಭಿಮರಾಯ ದೇವರ, ಗುರುಲಿಂಗಪ್ಪ ಬಂದಳ್ಳಿ, ಜಗದೀಶ ಚವ್ವಾಣ, ನಾಗರಾಜ ಹಡಪದ ಅವರು ಸೇರಿದಂತೆ ಹಲವರು ಮಾತನಾಡಿ ಗ್ರಾಮದ ಫಲವತ್ತಾದ ಭೂಮಿಯನ್ನು ರೈತರು ಕಂಪನಿಗೆ ನೀಡುತ್ತಿದ್ದು ಅವರ ಮುಂದಿನ ಭವಿಷ್ಯಕ್ಕಾಗಿ ಅವರಿಗೆ ಅವರ ಕುಟುಂಬಕ್ಕೆ ಅನ್ಯಾಯವಾಗದಂತೆ ಸೂಕ್ತ ಸೌಲಭ್ಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಕಂಪನಿಯ ಮುಖ್ಯಸ್ಥ ಕೆ.ವಿ. ರೆಡ್ಡಿ ಕಂಪನಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಯಾಮಾವಳಿಯ ಅನುಗುಣವಾಗಿ ಮತ್ತು ಮಾರ್ಗಸೂಚಿಯಂತೆ ಗ್ರಾಮಸ್ಥರ ಒಳಿತಿಗೆ, ಜನರ ಆರೊಗ್ಯ ಕಾಪಾಡುವ ಸಂಕಲ್ಪದಿಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ, ಪಿಎಸ್‌ಐ ಗಳಾದ ಶ್ರೀಶೈಲ ಅಂಬಾಟಿ, ಚೇತನ ಪ್ರಜಾರಿ, ಚಂದ್ರಾಮಪ್ಪ ಬಳಿಚಕ್ರ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.