- ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘ ಮುಖಂಡ ಮಹಮ್ಮದ್ ಆಗ್ರಹ
- ಸಿ.ಎಂ. ಶಾಬಾಜ್ ಖಾನ್ ಎಂಬಾತ ಯಂಗ್ ಸ್ಟಾರ್ ಗ್ಯಾರಂಟಿ ಯೋಜನೆಯಡಿ ಡೆಬ್ಟ್ ಪ್ರೀ ಇಂಡಿಯಾದ ಮೂಲಕ ಸಾಲ ಮನ್ನಾ ಆಮಿಷ
- ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ- - -
ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷದ ಹೆಸರು ಹೇಳಿಕೊಂಡು, ಸಾಲ ಮನ್ನಾ ಮಾಡಿಸುವುದಾಗಿ ಜನರಿಗೆ ವಂಚಿಸುತ್ತಿರುವ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಆರ್.ಟಿ.ಐ. ಮಾನವ ಹಕ್ಕುಗಳ ಸಂಘ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹಮ್ಮದ್ ವಾಸೀಂ ಖಾದ್ರಿ ಆಗ್ರಹಿಸಿದರು.
ಈಗಾಗಲೇ ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ತಲಾ ₹349 ಪಡೆದು ಸದಸ್ಯತ್ವ ನೀಡಿದ್ದು, ಜನರಿಗೆ ಸಾಲ ಕಟ್ಟದಂತೆ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರದ ನಕಲಿ ದಾಖಲೆ ಸೃಷ್ಟಿಸಿಕೊಂಡು, ಜನರನ್ನು ಯಾಮಾರಿಸುತ್ತಿದ್ದಾರೆ. ಇಂತಹ ವ್ಯಕ್ತಿ ಮಾಡುತ್ತಿರುವ ಸಾಲದ ಮಾಫಿಯಾದಿಂದಾಗಿ ಜನರು ಮೋಸ ಹೋಗುತ್ತಿದ್ದಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ತಾವು ಪಡೆದ ಸಾಲ ಕಟ್ಟದೇ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂತಹ ವ್ಯಕ್ತಿಯಿಂದ ಅಮಾಯಕ ಜನರು ವಂಚನೆಗೆ ಒಳಗಾಗದಂತೆ ತಕ್ಷಣ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
- - -
ದಾವಣಗೆರೆಯಲ್ಲಿ ಮಹಮ್ಮದ್ ವಾಸೀಂ ಖಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.