ಕುರುಗೋಡು: ಪಟ್ಟಣದ ಮುಖ್ಯವೃತ್ತದಲ್ಲಿ ಭಾನುವಾರ ತೆರೆದಿರುವ ಪೋಲಿಯೋ ಲಸಿಕೆ ಕೇಂದ್ರದಲ್ಲಿ ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಮಗುವಿಗೆ ಎರಡು ಹನಿ ಪೋಲಿಯೊ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಪೋಲಿಯೋ ಮುಕ್ತ ದೇಶ ಮಾಡಲು ಎಲ್ಲರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಿ ಎಂದು ಸಲಹೆ ನೀಡಿದರು
ತಾಲ್ಲೂಕಿನಲ್ಲಿ ೫ ವರ್ಷದೊಳಗಿರುವ ಮಕ್ಕಳಸಂಖ್ಯೆ ೧೮೦೬೩ ಇದೆ. ಲಸಿಕೆ ಹಾಕಲು ತಾಲೂಕಿನಾದ್ಯಂತ ಒಟ್ಟು ೮೦ ಬೂತ್‌ಗಳನ್ನು ತೆರೆಯಲಾಗಿದೆ. ಶೇ ೯೯ ಗುರಿ ಹೊಂದಲಾಗಿದೆ. ಮೊದಲ ದಿನ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಮುಂದಿನ ಮೂರುದಿನ ಆರೋಗ್ಯ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ನರಸಪ್ಪ, ಆರೋಗ್ಯ ಇಲಾಖೆ ತಾಲೂಕು ನೋಡೆಲ್ ಅಧಿಕಾರಿ ಡಾ. ವೀರೇಂದ್ರ ಕುಮಾರ್, ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಸದಸ್ಯ ನಟರಾಜ, ಕಲ್ಗುಡೆಪ್ಪ ಸಿಬ್ಬಂದಿ ವನಜಾ, ಪ್ರಕಾಶ ಮತ್ತು ಮೆಹಬೂಬಾಷಾ ಇದ್ದರು.ಪೋಲಿಯೋ ನಿರ್ಮೂಲನೆಗೆ ಕೈಜೋಡಿಸಿಸಿರುಗುಪ್ಪ: ಎರಡು ಹನಿ ಲಸಿಕೆಯು ಮಗುವಿನ ಭವಿಷ್ಯವನ್ನು ನಿರ್ಧರಿಸಲಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ ಪೋಲಿಯೋ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಶಾಸಕ ಬಿ.ಎಂ. ನಾಗರಾಜ ಮನವಿ ಮಾಡಿದರು.
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ʼರಾಷ್ಟ್ರೀಯ ಪೋಲಿಯೋ ಲಸಿಕಾʼ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದರು.ಉಪತಹಸೀಲ್ದಾರ್ ಸಿದ್ದಾರ್ಥ ಕಾರಂಜಿ, ತಾಲೂಕು ವೈದ್ಯಾಧಿಕಾರಿ ದಮ್ಮೂರು ಬಸವರಾಜ, ನಗರಸಭೆ ಪೌರಾಯುಕ್ತ ಗಂಗಾಧರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ನಗರಸಭೆ ಮಾಜಿ ಸದಸ್ಯ ಎಚ್. ಗಣೇಶ್, ಮುಖಂಡರಾದ ಬಗ್ಗೂರು ವೆಂಕಟೇಶ, ಗೊರವರ ಶ್ರೀನಿವಾಸ್, ವೈದ್ಯಾಧಿಕಾರಿ, ಸಿಬ್ಬಂದಿ ವರ್ಗದವರು ಸಾರ್ವಜನಿಕರು ಇದ್ದರು.