ಪ್ರಶಸ್ತಿ ಮುಖ್ಯವಲ್ಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆಯೇ ಭಾಗ್ಯ

KannadaprabhaNewsNetwork |  
Published : Nov 22, 2025, 02:15 AM IST
೨೦ಶಿರಾ೩: ಶಿರಾ ತಾಲೂಕಿನ ಬುಕ್ಕಾಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೇ ಹೊರತು ಪ್ರಶಸ್ತಿ ಮುಖ್ಯವಲ್ಲ

ಕನ್ನಡಪ್ರಭ ವಾರ್ತೆ ಶಿರಾ

ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೇ ಹೊರತು ಪ್ರಶಸ್ತಿ ಮುಖ್ಯವಲ್ಲ ಕ್ರೀಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲೆಯನ್ನು ಪ್ರತಿನಿಧಿಸುವ ಹಾಗೆ ನೀವು ಆಯ್ಕೆಯಾದಾಗಲೇ ವಿಜೇತರಾಗಿದ್ದೀರಿ ವೇದಿಕೆ ನಿಮಗೆ ಸಿಕ್ಕ ಅವಕಾಶವೆಂದು ತಿಳಿಯಿರಿ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಹೇಳಿದರು.

ಅವರು ತಾಲೂಕಿನ ಬುಕ್ಕಾಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು. ಶಿಕ್ಷಣವೆಂದರೆ ಕೇವಲ ಅಂಕಗಳಿಗೆ ಸೀಮಿತವಾಗಿ ರ್ಯಾಂಕು ಪಡೆಯುವುದು ಮಾತ್ರವಲ್ಲ ಶಿಕ್ಷಣವೆಂದರೆ ಮಗುವಿನಲ್ಲಿರುವ ಸೂಕ್ತ ಪ್ರತಿಭೆಗಳನ್ನು ಹೊರ ಚೆಲ್ಲುವುದೇ ಆಗಿದೆ. ಮಗುವನ್ನು ಯಾವ ವಿಷಯದಲ್ಲಿ ಅತಿ ಪ್ರಾಮುಖ್ಯತೆ ಪಡೆದಿದೆ ಯಾವ ಕಲೆ ಮೈಗೂಡಿಸಿಕೊಂಡಿದೆ. ಯಾವ ಕಲೆ ಸಂಸ್ಕೃತಿ ನೃತ್ಯ ನಾಟಕ ಆ ಮಗುವಿನಲ್ಲಿ ಆಸಕ್ತಿ ಹೊಂದಿದೆ ಎಂಬುದನ್ನು ಅರಿತು ಆ ಮಗುವಿಗೆ ಪ್ರೋತ್ಸಾಹ ನೀಡಿದಾಗ ಆ ಮಗು ಹೋಬಳಿ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸುತ್ತದೆ ಮಗುವಿಗೆ ಸೂಕ್ತ ವೇದಿಕೆ ಅವಶ್ಯಕತೆ ಇದೆ. ಇದನ್ನು ಅರಿತ ಸರ್ಕಾರ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕ್ರೀಡಾಕೂಟಗಳು ಪ್ರತಿಭಾ ಕಾರಂಜಿಗಳು ಶೈಕ್ಷಣಿಕ ಪ್ರವಾಸ ಇನ್ನಿತರೆ ಪಠ್ಯೇತರ ಚಟುವಟಿಕೆಗಳನ್ನು ರೂಪಿಸುತ್ತಿದೆ ಇವುಗಳನ್ನು ಬಳಸಿಕೊಂಡು ಶಿಕ್ಷಕರು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ತೀರ್ಪುಗಾರರಾಗಿ ಆಯ್ಕೆಯಾದ ಲಕ್ಷ್ಮಿಕಾಂತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಬುಕ್ಕಾಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಮುಜಾಹಿದ್, ಬಿ ಆರ್ ಎಂ ಸತ್ಯನಾರಾಯಣ, ದೀಪ್ತಿ ಮೆಡಿಕಲ್ಸ್ ಮಂಜಣ್ಣ, ದಿವಾಕರ್, ಡಿಶ್ ದಯಾನಂದ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಿಶನ್, ಸದಸ್ಯರಾದ ತಿಪ್ಪೇಶ್, ಚಿತ್ತಯ್ಯ, ನಾಝಿಮಾ, ಮಹೇಶ್, ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜೈನುಲಾಬ್ದಿನ್ ಖಾಝಿ, ಸಹಶಿಕ್ಷಕರಾದ ಬಸವರಾಜು, ಗಂಗಾಧರ್, ಮಂಜುಳಾ, ಉಮ್ಮೆಸಲ್ಮಾ, ವಿನೋದ, ಲಕ್ಷ್ಮೀದೇವಿ, ರಂಗಪ್ಪ, ಲತಾ, ಉಮಾ, ಸೇರಿದಂತೆ ಎಲ್ಲ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಗ್ರಾಮಸ್ಥರು ಮುಖಂಡರು ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ
ಸೈಬರ್ ವಂಚನೆಗಳ ತಡೆಯಲು ಕೆನರಾ ಬ್ಯಾಂಕ್‌ ಆದ್ಯತೆ