ಮಳವಳ್ಳಿ: ಪ್ರತಿಭೆಗೆ ಅನುಗುಣವಾಗಿ ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ತಕ್ಕ ಪ್ರತಿಫಲ ಸಿಗಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಳವಳ್ಳಿ ಎಂ.ಸಿದ್ದರಾಜು ಅಭಿಪ್ರಾಯಪಟ್ಟರು.
ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಪತ್ರಿಕೋಧ್ಯಮದಲ್ಲಿ ಸೇವೆ ಸಲ್ಲಿಸುತ್ತಾ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದು ತಾಲೂಕಿಗೆ ಕೀರ್ತಿ ತಂದ ಎಂ.ಸಿದ್ದರಾಜು ಅವರು ಇನ್ನೂ ಹೆಚ್ಚಿನ ಸಾಮಾಜಿಕ ಸೇವೆಯಲ್ಲಿ ತೊಡಗಲಿ ಎಂದು ಶುಭ ಕೋರಿದರು.
ತಾಲೂಕು ಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರು ನಡೆದಾಡಿದ ಸಾಂಸ್ಕೃತಿಕ ಸ್ಥಳವಾಗಿದೆ. ಈ ಮಣ್ಣಿನಲ್ಲಿ ರಂಗಭೂಮಿ, ಜಾನಪದ, ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಲವಾರು ಸಾಧಕರನ್ನು ಕಾಣಬಹುದಾಗಿದೆ. ಇಂಥವರ ನಡುವೆ ಎಂ.ಸಿದ್ದರಾಜು ಅವರು ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ತಾಲೂಕಿಗೆ ಕೀರ್ತಿ ತರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಇದೇ ವೇಳೆ ಪತ್ರಕರ್ತರಾದ ಸಿದ್ದರಾಜು ದಂಪತಿಯನ್ನು ಅಭಿನಂದಿಸಿ ಗೌರವಿಸಲಾಯಿತು. ಪುರಸಭೆ ಮಾಜಿ ಸದಸ್ಯ ಕೃಷ್ಣ, ಮುಖಂಡರಾದ ರವಿ, ರಮೇಶ್, ಕೃಷ್ಣ, ಬಸವಯ್ಯ, ರಾಶಿರಾಪು ಕುಮಾರ್, ಯ.ಸಿದ್ದಪ್ಪ, ಬಸವರಾಜು, ಪ್ರಸನ್ನ, ಪದ್ಮ ಸೇರಿ ಇತರರು ಇದ್ದರು.