ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ವೇ ಜನಾಃ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್(ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಜನಪದ ವೈಭವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ ಕರ್ನಾಟಕ ಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿ ನಗರದ ಸುಭಾಸ ಕಾಲೋನಿಯ ಓಂ ಶಾಂತಿ ಸೆಂಟರ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೇರೆಯವರಿಗೆ ನೀಡುವ ಹಾಗೂ ನಮಗೆ ಲಭಿಸುವ ಪ್ರಶಸ್ತಿಗಳು ನಮ್ಮನ್ನೂ ಸೇರಿದಂತೆ ಇನ್ನೊಬ್ಬರ ಮೇಲೆ ಪ್ರಭಾವವನ್ನು ಬೀರುತ್ತವೆ. ಹಾಗೆಯೇ ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸಿ ಆತ್ಮಸ್ಥೈರ್ಯ ಮತ್ತು ಸಂತೃಪ್ತಿ ಭಾವವನ್ನು ತಂದು ಕೊಡುತ್ತವೆ ಎಂದು ವಿವರಿಸಿದರು.ಕೆಲವೊಂದು ಕೆಲಸಗಳು ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿದ್ದಾಗ ಪ್ರವೃತ್ತಿಗೆ ಪೂರಕವಾಗಿ ಹಾಗೂ ಪರಿಸ್ಥಿತಿಗೆ ಕೈಗೊಂಬೆಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಸಂದರ್ಭದಲ್ಲಿ ನಾವು ಕೇವಲ ನಮ್ಮ ತೃಪ್ತಿಗೆ ಕೆಲಸ ಮಾಡದೇ ಸರ್ವರು ಮೆಚ್ಚುವಂತ ಕೆಲಸ ಮಾಡಬೇಕು. ಅಂತಹ ದಿಟ್ಟ ನಿರ್ಧಾರ ಮಾಡಬೇಕು ಎಂದು ಸಲಹೆ ನೀಡಿದರು.ಸ್ತ್ರೀ ಶೋಷಣೆ ಸೇರಿದಂತೆ ಯಾವುದೇ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಇದಕ್ಕೆ ಕುಟುಂಬ ಹಾಗೂ ಸಮಾಜ ಬೆಂಬಲವಾಗಿ ನಿಂತಾಗ ಮಾತ್ರ ಹೋರಾಟದಲ್ಲಿ ಜಯ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಓಂ ಶಾಂತಿಯ ಸಂಗೀತಾ ಅಕ್ಕನವರು ಮಾತನಾಡಿ, ಓಂ ಶಾಂತಿ ಎಂಬುವುದು ಮನಸ್ಸಿನ ಹಾಗೂ ಜಗತ್ತಿನ ಶಾಂತಿಗಾಗಿ ನೀವು ಮಾಡುವ ಆಹ್ವಾನವಾಗಿದೆ. ಇದು ದೇವರಿಗೆ ಆಹ್ವಾನವೂ ಹೌದು ಎಂದು ನುಡಿದರು.ಸಾಮಾನ್ಯವಾಗಿ ಓಂ ಶಾಂತಿ ಶಾಂತಿ ಶಾಂತಿ ಎಂದು 3 ಬಾರಿ ಜಪಿಸಲಾಗುತ್ತಿದ್ದು, ಈ ಮಂತ್ರದ ಅರ್ಥ ನೆಮ್ಮದಿಯಾಗಲಿ, ನಿರಾಳವಾಗಲಿ, ಶಾಂತಿಯಾಗಲಿ ಎಂದು. ಈ ಪದಗುಚ್ಛವನ್ನು ನಮಸ್ಕಾರವಾಗಿಯೂ ಮಾಡಬಹುದು. ಇದು ಹೆಚ್ಚಾಗಿ ಹಿಂದೂ ಮತ್ತು ಬೌದ್ಧರ ಪ್ರಾರ್ಥನೆ, ಬರಹಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಕಂಡು ಬರುತ್ತದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಸುವರ್ಣ ಸಾಧಕಿ-25 ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕೋಟೆನ್ನವರ ಸೇರಿದಂತೆ ಓಣಿಯ ಮಹಿಳೆಯರು ಉಪಸ್ಥಿತರಿದ್ದರು.ಸಮಾಜದಲ್ಲಿ ವಕೀಲ ವೃತ್ತಿ ಎಷ್ಟು ಗೌರವವಿದೆಯೋ ಅಷ್ಟೇ ಸಮನಾದ ಅಗೌರವ ತೊರುವಂತ ವಿಭಿನ್ನ ಭಾವನೆಗಳೂ ಇರುವುದು ಸಹಜ. ಆದರೆ, ನೈಜ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡುವ ಕೆಲಸ ಮಾತ್ರ ನಮಗೆ ಹೆಚ್ಚೆಚ್ಚು ಗೌರವ ತಂದು ಕೊಡುತ್ತದೆ.
-ಭಾರತಿ ತೆಗ್ಗಳ್ಳಿ (ಹಿರೇಮಠ), ವಕೀಲರು.