ಕನ್ನಡಪ್ರಭ ವಾರ್ತೆ ಸಿಂದಗಿ
ಅಂಬೇಡ್ಕರ ಅವರು ಸಮಾಜದ ವಂಚಿತ ಮತ್ತು ದುರ್ಬಲ ವರ್ಗಗಳ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅವರು ಹಾಕಿಕೊಟ್ಟ ಸಂವಿಧಾನದಿಂದ ನಾವು ಮಾನವರಾಗಿ ಬಾಳುತ್ತಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೆಯ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಅಸಮಾನತೆಯನ್ನು ತೊಡೆದು ಹಾಕುವ ಮಾರ್ಗವನ್ನು ತೋರಿಸಿದ್ದಲ್ಲದೆ, ಭಾರತದ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂವಿಧಾನಿಕ ಹಕ್ಕುಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ವಿಚಾರಗಳನ್ನು ಪೂಜಿಸಿ, ಅನುಸರಿಸಿ ಅವರ ತತ್ವಾದಾರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಪ್ರಾಧ್ಯಾಪಕ ಡಾ.ಕರಿಗೋಳೇಶ್ವರ ಪರತಾಬಾದ ಉಪನ್ಯಾಸ ನೀಡಿದರು. ರಾಜಶೇಖರ ಕೂಚಬಾಳ, ಸಾಯಬಣ್ಣ ಪುರದಾಳ ಮಾತನಾಡಿದರು. ತಹಶೀಲ್ದಾರ್ ಕರೆಪ್ಪ ಬೆಳ್ಳಿ ಸಂವಿಧಾನ ಪೀಠಿಕೆ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ ಸ್ವಾಗತಿಸಿದರು. ರಾಗರಂಜಿನಿ ಡಾ.ಪ್ರಕಾಶ ಮೂಡಗಲಿ ಪ್ರಾರ್ಥಿಸಿದರು. ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿ ವಂದಿಸಿದರು.
ತಾಪಂ ಇಒ ರಾಮು ಅಗ್ನಿ, ಉಪನೋಂದಣಿ ಅಧಿಕಾರಿ ಕಿರಣ ಹಂಪಿಹೊಳಿ, ಪೌರಾಯುಕ್ತ ಎಸ್.ರಾಜಶೇಖರ, ಪಶು ವೈದ್ಯಾಧಿಕಾರಿ ಡಾ.ಶಿವಶರಣಪ್ಪ ಯಲಗೋಡ, ಎಡಿಎಲ್‌ಆರ್ ಶಾಂತಕುಮಾರ ಅಗಸಬಾಳ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಪುರಸಭೆ ಮಾಜಿ ಅಧ್ಯಕ್ಷ ಶಾಂತವೀರ ಬಿರಾದಾರ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಸಿಡಿಪಿಒ ಅನಿಲ ಹಳ್ಳಿ, ರವಿರಾಜ ದೇವರಮನಿ, ಸುನಂದಾ ಯಂಪುರೆ, ಮುಂತಾದವರು ಇದ್ದರು.