ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಕೂಡಗಿ ಎನ್‌ಟಿಪಿಸಿಯಲ್ಲಿ ಹಾರುಬೂದಿಯಿಂದಾಗಿ ಸುತ್ತಮುತ್ತಲಿನ ರೈತರ ಜಮೀನಿನ ಕುಡಿಯುವ ನೀರು ಹಾಗೂ ಬೆಳೆಗಳ ಮೇಲೆ ಬೂಧಿನಿಂತು ಸಾಕಷ್ಟು ನಷ್ಟ ಉಂಟಾಗಿರುವುದನ್ನು ಖಂಡಿಸಿ ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಕೊಡಬೇಕು ಹಾಗೂ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಬೇಕು. ಅದರಲ್ಲಿ ವಿಶೇಷವಾಗಿ ತಿಡಗುಂದಿ ಕೆರೆ ಹಾಗೂ ಚಡಚಣ ತಾಲೂಕಿಗೆ ಸಂಬಂಧಪಟ್ಟಂತೆ ಎಲ್ಲ ಡಿಸ್ಟ್ರಿಬ್ಯೂಟರ್ ಗಳಿಗೆ ನೀರು ಹರಿಸಿ ಬೋರಿಹಳ್ಳವನ್ನು ಕೂಡ ತುಂಬಬೇಕೆಂದು ಮನವಿ ಮಾಡಲಾಯಿತು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಕೋಲಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ, ವಿಜಯಪುರ ತಾಲೂಕಾಧ್ಯಕ್ಷ ಅನಮೇಶ ಜಮಖಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಳಿ, ಮುಖಂಡರಾದ ರಾಮಸಿಂಗ ರಜಪೂತ, ಪ್ರಕಾಶ ತೇಲಿ, ಶಂಕರಗೌಡ ಬಿರಾದಾರ, ಸುನೀಲಕುಮಾರ ಹಿರೇಮಠ, ವೀರಣ್ಣ ಸಜ್ಜನ, ಕಾಲೇಸಾಬ ನದಾಫ, ರಾಜುಗೌಡ ಪಾಟೀಲ, ಗ್ಯಾನುಗೌಡ ಪಾಟೀಲ, ಬಸು ತಳವಾರ, ಸುನಿಲ ಕೋಲಕಾರ, ಬಸವರಾಜ ಮಸೂತಿ, ಸಂಗಮೇಶ ಕೊಣಸಿರಸಗಿ, ವಿಕ್ರಂ ವಾಗಮೋರೆ, ಅನಿಲ ಕೋಳಿ ಇದ್ದರು,

ಜಂಬಗಿ ಗ್ರಾಮದಲ್ಲಿ ಕೆರೆ ನೀರು ತುಂಬಬೇಕು ಜತೆಗೆ ಗ್ರಾಮದಲ್ಲಿಯ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡಬೇಕು. ಇವುಗಳ ಜತೆಗೆ ಜಂಬಗಿಯಿಂದ ಆಹೇರಿಗೆ ಹೋಗುವ ದಾರಿಯೂ ಸುಮಾರು 30 ಲಕ್ಷ ರೂ.ಗಳ ಪಿಆರ್‌ಡಿ ಅನುದಾನದಲ್ಲಿ ಮಾಡುತ್ತಿದ್ದು, ಸಂಪೂರ್ಣ ಕಳಪೆ ಹಾಗೂ ಅಪೂರ್ಣಗೊಂಡಿದೆ. ಅದನ್ನು ಸಂಪೂರ್ಣ ಮಾಡಿಕೊಡಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.