ಗಂಗಾವತಿ: ಪ್ರಶಸ್ತಿಗಳು ಗೌರವದ ಜತೆಗೆ ಶಿಕ್ಷಕರ ವೃತ್ತಿಗೆ ಶಕ್ತಿ ಹೆಚ್ಚಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ನಟೇಶ್ ಹೇಳಿದರು.
ರೋಟರಿ ಅಧ್ಯಕ್ಷ ಟಿ. ಆಂಜನೇಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ 120 ವರ್ಷಗಳ ಇತಿಹಾಸ, ವಿಶ್ವವ್ಯಾಪ್ತಿ ಸೇವಾ ಕಾರ್ಯ ಹೊಂದಿದೆ. ಸಾಮಾಜಿಕ, ಆರೋಗ್ಯ ಸೇವೆಯ ಜತೆಗೆ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂದಿದೆ. ನಮ್ಮ ಸಂಸ್ಥೆ ಶಾಲಾ ದತ್ತು, ಮಕ್ಕಳ ಆರೋಗ್ಯ, ಶಿಕ್ಷಣ ಸಾಮಗ್ರಿಗಳನ್ನು, ಕಂಪ್ಯೂಟರ್ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ಮಾಜಿ ಅಸಿಸ್ಟೆಂಟ್ ಗವರ್ನರ್ ಮಹೇಶ ಸಾಗರ ಮಾತನಾಡಿ, ಶಿಕ್ಷಕರು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವವರಾಗಿದ್ದಾರೆ. ಭವಿಷ್ಯ ಸಂಪೂರ್ಣವಾಗಿ ಶಿಕ್ಷಕರ ಕೈಯಲ್ಲಿದೆ. ಸಧೃಡ ದೇಶ ನಿರ್ಮಿಸುವವರನ್ನು ಆಯ್ಕೆ ಮಾಡುತ್ತಾರೆ. ವಿಶೇಷವಾಗಿ ಸರ್ಕಾರಿ ಶಾಲಾ ಶಿಕ್ಷಕರು ಎಲ್ಲರಿಗೂ ಪ್ರೀತಿ ಪಾತ್ರರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಜ್ಞಾನ ನೀಡುತ್ತ ಬಂದಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಕ್ಷಕರಾದ ಗೋಪಾಲಕೃಷ್ಣ ಕುಲ್ಕರ್ಣಿ ಮರಕುಂಬಿ, ಬಸೆಟ್ಟಪ್ಪ ರಾಮಲಿಂಗೇಶ್ವರ ಕ್ಯಾಂಪ್, ಸುರೇಶ್ ಜಿ.ಎಸ್. ಸವಳ ಕ್ಯಾಂಪ್, ಆಶ್ರಯ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗರತ್ನಾ ಎಚ್., ಅನ್ನಪೂರ್ಣಾ ಕಾರಟಗಿ, ಕವಿತಾ ಅಸುಂಡಿ, ಬಸಾಪಟ್ಟಣ ಅವರಿಗೆ ನೇಶನ್ ಬಿಲ್ಡರ್ ಅವಾರ್ಡ್‌ನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿಎಚ್. ನಟೇಶ್ ನೀಡಿ ಗೌರವಿಸಿದರು.
ಟಿ.ಸಿ. ಶಾಂತಪ್ಪ, ರೋಟರಿ ಅಧ್ಯಕ್ಷ ಜಗದೀಶ ಅಂಗಡಿ ಭಾಗವಹಿಸಿದ್ದರು.