ಅ.೨೪ರಂದು ಜಾನಪದ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Oct 20, 2026, 01:15 AM IST
೧೯ಕೆಎಂಎನ್‌ಡಿ-೧ಜಾನಪದ ಅಕಾಡೆಮಿಯಿಂದ ನೀಡಲಾಗುವ ಪ್ರಶಸ್ತಿ ಕುರಿತು ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ೨೦೨೬ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿ ಪ್ರದಾನ ಸಮಾರಂಭ ಅ.೨೪ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ೨೦೨೬ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿ ಪ್ರದಾನ ಸಮಾರಂಭ ಅ.೨೪ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ಎಸ್.ತಂಗಡಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಪ್ರಶಸ್ತಿ ಪ್ರದಾನ ಮಾಡುವರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರಲಿದ್ದು, ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಗೌರವ ಉಪಸ್ಥಿತರಿರಲಿದ್ದು, ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರು ಭಾಗವಹಿಸುವರು.

ಗೌರವ ಪ್ರಶಸ್ತಿ ಪುರಸ್ಕೃತರು:

ಜಾನಪದ ಗಾಯನದಿಂದ ಎಸ್.ಎಂ.ರಾಜಣ್ಣ, ಶಂಕರ್ ಭಾರತೀಪುರ, ಡಾ.ಸೋ.ಸು.ನಾಗೇಂದ್ನಾಥ್, ಟಿ.ತಿಮ್ಮೇಶ್, ಡಿ.ರಾಮಪ್ಪ, ಸಿ.ಎಂ.ನರಸಿಂಹಮೂರ್ತಿ, ಸೂರ್ಯಕಾಂತ ಪೂಜಾರಿ, ದೇವದಾಸ ಚಿಮಕೋಡ, ಸ.ಹುಲಿಗೆಪ್ಪ, ಪೂಜಾ ಕುಣಿತದಿಂದ ಮಾಯಣ್ಣ, ಬುರ್ರುಕಥೆಯಿಂದ ಎ.ಎಲ್.ವೆಂಕಟೇಶ್, ವೀರಗಾಸೆಯಿಂದ ಸಿ.ವಿ.ವೀರೇಶ್‌ಕುಮಾರ್, ಕೆ.ಎನ್.ಮಹೇಶ್, ರಂಗ ಕುಣಿತದಿಂದ ಎಸ್.ಎಸ್.ನಿಂಗಪ್ಪ, ದೈವನರ್ತಕದಿಂದ ಸುಬ್ಬಣ್ಣ ಪಂಡಿತ್, ಭಜನೆಯಿಂದ ಬೈಲೂರು ಗೋವಿಂದರಾಜಶೆಟ್ಟಿ, ಜಾನಪದ ನೃತ್ಯದಿಂದ ಜಿ.ಬಿ.ರಮೇಶ, ಸಂಬಾಳ ವಾದನದಿಂದ ಹಣಮಂತ ಗೋವಿಂದಪ್ಪ ಹೂಗಾರ. ತಂಬೂರಿ, ತತ್ವಪದದಿಂದ ಬಸಣ್ಣ ಶಿವಬಸಪ್ಪ ಮುಳಗುಂದ, ಸಂಪ್ರದಾಯ ಪದದಿಂದ ಭೀಮಬಾಯಿ ಗೌಡತಿ. ಕರಡಿಮೇಳದಿಂದ ದಾನಯ್ಯಾ ಮಹಾಲಿಂಗಯ್ಯಾ ಮಠಪತಿ, ಹಾಲಕ್ಕಿ ಸುಗ್ಗಿ ಕುಣಿತದಿಂದ ಪುರುಷೋತ್ತಮಗೌಡ, ಚರ್ಮವಾದ್ಯ ತಯಾರಿಕೆ ಕ್ಷೇತ್ರದಿಂದ ಕಲ್ಲಪ್ಪ ಬಿಜಪ್ಪ, ಬಗರಿಕಾರ, ಜಾನಪದ ಸಂಗೀತದಿಂದ ಗೌಡಪ್ಪ ವೆಂಕಪ್ಪ, ಗೀಗೀಪದದಿಂದ ಮುದಕವ್ವ ಗಂಜಾಳ, ತಾಷಾರಂ ಡೋಲು ಕ್ಷೇತ್ರದಿಂದ ಎನ್.ಟಿ.ಹುಸೇನ್‌ಬಾಷ, ಡೊಳ್ಳಿನ ಪದದಿಂದ ಶರಣಪ್ಪ.

ತಜ್ಞ ಪ್ರಶಸ್ತಿ ಪುರಸ್ಕೃತರು:

ಡಾ.ಜೀಶಂಪ ತಜ್ಞ ಪ್ರಶಸ್ತಿಯನ್ನು ಡಾ.ಎಂ.ಭೈರೇಗೌಡ, ಡಾ.ಬಿ.ಎಸ್.ಗದ್ದಗೀಮಠ ತಜ್ಞ ಪ್ರಶಸ್ತಿಯನ್ನು ಡಾ.ವಿ.ಎಲ್.ಪಾಟೀಲ ಅವರಿಗೆ ನೀಡಿ ಗೌರವಿಸಲಾಗುವುದು. ಗೋಷ್ಠಿಯಲ್ಲಿ ಸಿ.ಎನ್.ಮಂಜೇಶ್, ಡಾ.ಕೆಂಪಮ್ಮ, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ