ಸಂವಿಧಾನದ ಆಶಯಗಳ ಬಗ್ಗೆ ಜಾಗೃತಿ ಅಗತ್ಯ

KannadaprabhaNewsNetwork |  
Published : Feb 01, 2025, 12:47 AM IST
ಪೊಟೊ: 31ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಶುಕ್ರವಾರ ಅಹಿಂದ ಚಳವಳಿ, ಮಿಲಿಂದ ಸಂಘಟನೆ ಹಾಗೂ ಹಿಂದುಳಿದ ಜನ ಜಗೃತಿ ವೇದಿಕೆಯಿಂದ ಸಂವಿಧಾನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಹಿಂದ ಸಮ್ಮಿಲನ, ಚಿಂತನ, ಮಂಥನ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕತ ಪತ್ರಕರ್ತ ಆರುಂಡಿ ಶ್ರೀನಿವಾಸ್‌ರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಶಿವಮೊಗ್ಗ : ದೇಶದ ಸಂವಿಧಾನದ ಆಶಯಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಅಗತ್ಯ ಎಂದು ಅಹಿಂದ ಚಳವಳಿಯ ಪ್ರಧಾನ ಸಂಚಾಲಕ ಎಸ್. ಮೂರ್ತಿ ಹೇಳಿದರು.

ಶಿವಮೊಗ್ಗ : ದೇಶದ ಸಂವಿಧಾನದ ಆಶಯಗಳ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಅಗತ್ಯ ಎಂದು ಅಹಿಂದ ಚಳವಳಿಯ ಪ್ರಧಾನ ಸಂಚಾಲಕ ಎಸ್. ಮೂರ್ತಿ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಅಹಿಂದ ಚಳವಳಿ, ಮಿಲಿಂದ ಸಂಘಟನೆ ಹಾಗೂ ಹಿಂದುಳಿದ ಜನ ಜಗೃತಿ ವೇದಿಕೆಯಿಂದ ಸಂವಿಧಾನ ಸಂರಕ್ಷಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಹಿಂದ ಸಮ್ಮಿಲನ, ಚಿಂತನ, ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮ ಸಮಾಜ ಮತ್ತು ಸಮಾನತೆಯ ಭಾರತ ರಾಷ್ಟ್ರ ನಿರ್ಮಾಣಕ್ಕೆ ಜೊತೆಗೆ ಮೂಲ ಭಾರತೀಯರಾದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ರಕ್ಷಣೆಗೆ ಕಲ್ಯಾಣಕ್ಕೆ ಭಾರತ ಸಂವಿಧಾನ ಅನಿವಾರ್ಯವಾಗಿದೆ ಎಂದರು.

ಭಾರತದ ಸಂವಿಧಾನಕ್ಕೆ ಸೃಷ್ಟಿಸುತ್ತಿರುವ ಅಪಾಯಗಳ ಬಗ್ಗೆ ಮೂಲ ಭಾರತೀಯರನ್ನು ಎಚ್ಚರ ಗೊಳಿಸಬೇಕಾಗಿದೆ. ಸಂವಿಧಾನಕ್ಕೆ ಅಪಾಯ ಬಂದಾಗಲೆಲ್ಲಾ ನಾವುಗಳೇ ರಕ್ಷಣೆಗೆ ನಿಲ್ಲಬೇಕಾಗಿದೆ.

ಭಾರತ ಸಂವಿಧಾನದ ಮೂಲಭೂತ ಹಕ್ಕುಗಳೇ ಈ ಅಹಿಂದ ಸಮುದಾಯಗಳಿಗೆ ಇನ್ನೂ ತಲುಪಿಲ್ಲ. ಭಾರತದಲ್ಲಿ 23.4 ಕೋಟಿ ಕಡುಬಡವರಿದ್ದಾರೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಪ್ರಕಟಿಸಿರುವ ವರದಿಯಲ್ಲಿದೆ. ಈ ಕಡುಬಡವರೆಲ್ಲರೂ ಅಹಿಂದ ಸಮುದಾಯದವರೇ ಆಗಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕತ ಪತ್ರಕರ್ತ ಆರುಂಡಿ ಶ್ರೀನಿವಾಸ್‌ರನ್ನು ಸನ್ಮಾನಿಸಲಾಯಿತು.ಹಿಂದುಳಿದ ಜನಜಗೃತಿ ವೇದಿಕೆ ಗೌರವಾಧ್ಯಕ್ಷ ಪ್ರೊ.ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು.

ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ ಶ್ರೀನಿವಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಹಮ್ಮದ್ ಸನಾವುಲ್ಲಾ, ಜಿ.ಪರಮೇಶ್ವರಪ್ಪ, ಅಣ್ಣಪ್ಪ, ಆರ್.ಟಿ.ನಟರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ