ಅಪೌಷ್ಟಿಕತೆ ತಡೆಗೆ ಜಾಗೃತಿ ಮುಖ್ಯ: ಎಂ.ಎಚ್. ನದಾಫ

KannadaprabhaNewsNetwork |  
Published : Nov 11, 2025, 02:30 AM IST
10 ರೋಣ 1  ಸ್ತ್ರೀ ಶಕ್ತಿ ಭವನದಲ್ಲಿ ಕಾನೂನು ಸೇವಾ ಸೇವೆಗಳ ಸಮಿತಿ ,ಸಿಡಿಪಿಒ ಇಲಾಖೆ ವತಿಯಿಂದ ಜರುಗಿದ ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ವಕೀಲ ಎಂ.ಎಚ್.ಮುಲ್ಲಾ ಉದ್ಘಾಟಿಸಿದರು. | Kannada Prabha

ಸಾರಾಂಶ

ಪೌಷ್ಟಿಕ ಆಹಾರ ಸೇವಿಸುವಂತೆ ತಾಯಂದಿರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಜಾಗೃತಿ ಮೂಡಿಸಬೇಕು.

ರೋಣ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಸಿಡಿಪಿಒ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಪ್ರಜ್ಞಾವಂತರು ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅತೀ ಮುಖ್ಯವಾಗಿದೆ ಎಂದು ಹಿರಿಯ ವಕೀಲ ಎಂ.ಎಚ್. ನದಾಫ ತಿಳಿಸಿದರು.

ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ‌, ವಕೀಲರ ಸಂಘ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜರುಗಿದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌.

ಪೌಷ್ಟಿಕ ಆಹಾರ ಸೇವಿಸುವಂತೆ ತಾಯಂದಿರಲ್ಲಿ ಅರಿವು ಮೂಡಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟಲು ಜಾಗೃತಿ ಮೂಡಿಸಬೇಕು. ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ನೀಡಬೇಕು. ಅಸ್ವಚ್ಛತೆ ಹಾಗೂ ಅಪೌಷ್ಟಿಕತೆ ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.

ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಹಣ್ಣು, ತರಕಾರಿ, ಹಾಲು, ಮೊಟ್ಟೆ, ಬೇಳೆ ಕಾಳುಗಳು, ಧಾನ್ಯಗಳು ಮತ್ತು ಪ್ರೋಟಿನ್‌ಭರಿತ ಆಹಾರಗಳನ್ನು ನೀಡಬೇಕು. ಮಕ್ಕಳಿಗೆ ವಿವಿಧ ಆಹಾರಗಳನ್ನು ನೀಡುವ ಮೂಲಕ ಅವರು ಎಲ್ಲ ಪೋಷಕಾಂಶಗಳನ್ನು ಪಡೆಯುವಂತೆ ಮಾಡುವುದು ಮುಖ್ಯ. ಈ ದಿಶೆಯಲ್ಲಿ ತಾಯಂದಿರು, ಮನೆ, ಸಮುದಾಯದ ಪಾತ್ರ ಅತಿ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಪಿಪಿಒ ಶಿವಗಂಗಮ್ಮ, ಹಿರಿಯ ವಕೀಲ ವೈ.ಡಿ. ನದಾಫ, ಗುರುಶಿದ್ದಯ್ಯ ಹೆಬ್ಬಳ್ಳಿಮಠ, ಅಂಗನವಾಡಿ ಮೇಲ್ವಿಚಾರಕಿ ಸುವರ್ಣ ಹಾನಾಪೂರ, ರೇಖಾ ಚಂದ್ರಣ್ಣವರ, ಭಾರತಿ ಮಲ್ಲಾಪೂರ, ಆರ್.ಟಿ. ಶಹಪೂರ, ಆರ್.ಟಿ. ಮೆಣಸಗಿ, ಸರೋಜಿನಿ ಬಡಿಗೇರ, ಫಾತಿಮಾ ವಾಲಿಕಾರ, ‌ರಾಧಿಕಾ ಪವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವೈ.ಡಿ. ನದಾಫ ಸ್ವಾಗತಿಸಿದರು. ಆರ್.ಟಿ. ಮೆಣಸಗಿ ವಂದಿಸಿದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ರಾಜು ಹೆಬ್ಬಳ್ಳಿ ಆಯ್ಕೆ

ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ 2025- 2028ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜು ಎಂ. ಹೆಬ್ಬಳ್ಳಿ ಅವರು ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ ಎಂದು ಕಾನಿಪ ಜಿಲ್ಲಾ ಘಟಕದ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಹಿರೇಮಠ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ರಾಮಣ್ಣ ವಗ್ಗಿ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ, ಜಿಲ್ಲಾ ಕಾರ್ಯದರ್ಶಿಯಾಗಿ ಬನೇಶ ಕುಲಕರ್ಣಿ, ಚಂದ್ರಶೇಖರ ಕುಸ್ಲಾಪುರ, ಸಂಗಪ್ಪ ವ್ಯಾಪಾರಿ, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಭುಸ್ವಾಮಿ ಅರವಟಗಿಮಠ, ಅನೀಲ ತೆಂಬದಮನಿ, ವಿರೂಪಾಕ್ಷಪ್ಪ ಕಣವಿ ಚುನಾಯಿತರಾಗಿದ್ದಾರೆ.ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ಆನಂದಯ್ಯ ವಿರಕ್ತಮಠ, ರುದ್ರಗೌಡ ಪಾಟೀಲ, ಮಹಾಲಿಂಗಯ್ಯ ಹಿರೇಮಠ, ಸಂತೋಷಕುಮಾರ ಮುರಡಿ, ವೆಂಕಟೇಶ ಇಮರಾಪುರ, ಗಿರೀಶ ಕಮ್ಮಾರ, ಮಂಜುನಾಥ ಪತ್ತಾರ, ಮಲ್ಲಪ್ಪ ಕಳಸಾಪುರ, ಸಂತೋಷ ಕೊಣ್ಣೂರ, ಶಿವಕುಮಾರ ಶಶಿಮಠ, ನಿಂಗಪ್ಪ ಬೇವಿನಕಟ್ಟಿ, ಅಜಿತಕುಮಾರ ಹೊಂಬಾಳಿ, ಮೌನೇಶ್ವರ ಬಡಿಗೇರ, ಆದರ್ಶ ಕುಲಕರ್ಣಿ ಹಾಗೂ ಯಲ್ಲಪ್ಪ ತಳವಾರ ಚುನಾಯಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

PREV

Recommended Stories

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ಸರ್ಕಾರಕ್ಕೆ ಮನವಿ
ಪ್ರೇರಣಾ ಸಂಸ್ಥೆ ಜನಸಾಮಾನ್ಯರಿಗೆ ಮರಣಶಾಸನ: ಸುರೇಶ ಭೂಮರಡ್ಡಿ