ಮಕ್ಕಳಲ್ಲಿ ಅತಿಸಾರ ಭೇದಿ ತಡೆಯಲು ಅರಿವು ಅಗತ್ಯ: ಎಸ್.ಡಿ.ಬೆನ್ನೂರ್

KannadaprabhaNewsNetwork | Published : Jun 23, 2025 11:54 PM

ಬೇಸಿಗೆ ಮುಗಿಯುವ ಹಂತ, ಮಳೆಗಾಲ ಆರಂಭದಲ್ಲಿ ಕಂಡು ಬರುವ ಅತಿಸಾರ ಭೇದಿಯಿಂದ ದೇಶದಲ್ಲಿ ಲಕ್ಷಾಂತರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಾಯಿಲೆ ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿ ತಡೆಯುವ ಮುಂಜಾಗ್ರತ ಕ್ರಮ ಅನುಸರಿಸಲು ಸಾರ್ವಜನಿಕರಲ್ಲಿ ಅರಿವು ಅಗತ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ತಾಲೂಕಿನ ಹಂಪಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಮಹಾದೇವಪುರ ಆರೋಗ್ಯ ಕೇಂದ್ರದಿಂದ ನಡೆದ ಅತಿಸಾರ ತಡೆಗಟ್ಟುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇಸಿಗೆ ಮುಗಿಯುವ ಹಂತ, ಮಳೆಗಾಲ ಆರಂಭದಲ್ಲಿ ಕಂಡು ಬರುವ ಅತಿಸಾರ ಭೇದಿಯಿಂದ ದೇಶದಲ್ಲಿ ಲಕ್ಷಾಂತರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕಾಯಿಲೆ ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದೀಪ ಮಾತನಾಡಿ, ಓಆರ್‌ಎಸ್ ತಯಾರಿಸುವ ವಿಧಾನ ಹಾಗೂ ಕೈ ತೊಳೆದುಕೊಳ್ಳುವ ವೈಜ್ಞಾನಿಕ ವಿಧಾನಗಳ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಈ ವೇಳೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ, ಸಹ ಶಿಕ್ಷಕ ಹಸನ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ಕಾವೇರಿ, ಅಂಗನವಾಡಿ ಕಾರ್ಯಕರ್ತೆ ಉಮಾ, ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಸೇರಿದಂತೆ ಮಕ್ಕಳ ತಾಯಂದಿರು, ಶಾಲಾ ವಿದ್ಯಾರ್ಥಿಗಳು ಇದ್ದರು.

ಜೆಡಿಎಸ್ ಬೆಂಬಲಿತ ಮಹಿಳಾ ಡೇರಿ ನಿರ್ದೇಶಕರಿಗೆ ಮಾಜಿ ಸಚಿವ ಸಿಎಸ್ಪಿ ಅಭಿನಂದನೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ತಿರುಮಲಾಪುರ (ತಿರ್ಲಾಪುರ) ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿರ್ದೇಶಕರಾದ ಮಂಜುಳ, ಲೀಲಾವತಿ, ಶ್ವೇತ, ರಾಧ, ಜಯಲಕ್ಷ್ಮಿ, ರತ್ನಮ್ಮ, ಭಾಗ್ಯಮ್ಮ, ಸಾವಿತ್ರಮ್ಮ ಅವರನ್ನು ಅಭಿನಂದಿಸಿ ಮಾತನಾಡಿದ ಸಿಎಸ್ಪಿ, ತಿರುಮಲಾಪುರ ಮಹಿಳಾ ಡೈರಿ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಪೈಕಿ 8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಅಭೂತಪೂರ್ವ ಕೆಲವು ಸಾಧಿಸುವ ಮೂಲಕ ಪಕ್ಷವನ್ನು ಕೈಬಲಪಡಿಸಿದ್ದಾರೆ ಎಂದರು.

ತಾಲೂಕಿನಲ್ಲಿ ನಡೆದ ಬಹುತೇಕ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರನ್ನು ಗೆಲ್ಲಿಸಿ ಕೊಡುವ ಮೂಲಕ ಸಂಘದ ಆಡಳಿತ ಚುಕ್ಕಾಣೆ ಹಿಡಿಯುವಲ್ಲಿ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಈ ಚುನಾವಣೆಗಳ ಫಲಿತಾಂಶಗಳು ದಿಕ್ಸೂಚಿಯಾಗಲಿವೆ ಎಂದರು.

ಈ ವೇಳೆ ಮುಖಂಡರಾದ ದೇಶವಹಳ್ಳಿ ಪ್ರಭಾಕರ್, ಕೆಂಚನಹಳ್ಳಿ ವೇಣುಗೋಪಾಲ್, ಕೆ.ಎನ್.ನಾಗೇಗೌಡ, ಕೆರೆತೊಣ್ಣೂರು ಸೊಸೈಟಿ ಅಧ್ಯಕ್ಷ ಶ್ರೀನಿವಾಸ್, ನಿರ್ದೇಶಕ ವಿಜೇಂದ್ರ, ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಲೋಕೇಶ್, ಸೋಮಶೇಖರ್, ಕುಂಟೇಗೌಡ, ನಾಗಣ್ಣ, ಕೃಷ್ಣೇಗೌಡ, ಟ್ರಾನ್ಸ್‌ಪೋರ್ಟ್ ಮಾಲೀಕ ತಿಮ್ಮೇಗೌಡ, ಮಧು, ಹೊನ್ನರಾಜು ಸೇರಿದಂತೆ ಗ್ರಾಮಸ್ಥರು, ಮುಖಂಡರು, ಯುವಕರು ಹಾಜರಿದ್ದರು.