ವಾಲ್ಮಿಕಿ ನಿಗಮದಂತೆ ಭೋವಿ ನಿಗಮದಲ್ಲೂ ಹಗರಣ : ಡಾ.ಕೆ.ಸುಧಾಕರ್

KannadaprabhaNewsNetwork |  
Published : Jun 23, 2025, 11:54 PM ISTUpdated : Jun 24, 2025, 12:07 PM IST
ಸಿಕೆಬಿ-2  ನಗರ ಹೊರವಲಯದ  ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ    ಜನತಾ ದರ್ಶನ ದಲ್ಲಿ ಸಂಸದ ಡಾ.ಕೆ.ಸುಧಾಕರ್  ಸಾರ್ವಜನಿಕರಿಂದ ಅಹವಾಲು ಸ್ವೀಕರಿದರು | Kannada Prabha

ಸಾರಾಂಶ

ರಾಜ್ಯದ ವಾಲ್ಮಿಕಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರವಾಗಿ ಜೈಲು, ಕೋರ್ಟ್ ಎಲ್ಲಾ ಆಗಿದೆ. ಇದೇ ರೀತಿ ಭೋವಿ ನಿಗಮದಲ್ಲೂ ದೊಡ್ಡ ಹಗರಣವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರದ ವಿರುದ್ದ ಆರೋಪಿಸಿದರು.

 ಚಿಕ್ಕಬಳ್ಳಾಪುರ :   ರಾಜ್ಯದ ವಾಲ್ಮಿಕಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರವಾಗಿ ಜೈಲು, ಕೋರ್ಟ್ ಎಲ್ಲಾ ಆಗಿದೆ. ಇದೇ ರೀತಿ ಭೋವಿ ನಿಗಮದಲ್ಲೂ ದೊಡ್ಡ ಹಗರಣವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರದ ವಿರುದ್ದ ಆರೋಪಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿದ ನಂತರ ಸಂಸದರು ಪತ್ರಕರ್ತರ ಜತೆ ಮಾತನಾಡಿದರು.

ಫಲಾನುಭವಿಗಳ ಗತಿ ಏನು?

ಕಳೆದ ಮೂರು ವರ್ಷಗಳ ಹಿಂದೆ 2021,2022, 2023 ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ರದ್ದು ಮಾಡಿ, ಹೊಸದಾಗಿ ಫಲಾನುಭವಿಗಳ ಆಯ್ಕೆ ಮಾಡುತ್ತಾರಂತೆ. ಈ ಹಿಂದಿನ ಸರ್ಕಾರ ಮೂರು ವರ್ಷಗಳು ಆಯ್ಕೆ ಮಾಡಿರುವ ಫಲಾನುಭವಿಗಳ ಗತಿಯೇನು ಎಂದು ಪ್ರಶ್ನಿಸಿದರು. ಪರಿಶಿಷ್ಟ ಫಲಾನುಭವಿಗಳು ನೀರಾವರಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ಕನಸು ಕಂಡಿದ್ದರ ಕನಸು ಕನಸಾಗಿಯೇ ಉಳಿಯಬೇಕೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾನೂನು ಪ್ರಕಾರವೇ ಆಯ್ಕೆಮಾಡಿರುವ ಫಲಾನುಭವಿಗಳಿಗೆ ಬೋರ್ ವೆಲ್ ಕೊರೆಸಬೇಕು ಎಂದು ಒತ್ತಾಯಿಸಿದರು.

ಮನಿ ಇಲ್ಲ ಅಂದ್ರೆ ಮನೆಯಿಲ್ಲ, ಹಣ ಇಲ್ಲ ಅಂದ್ರೆ ಕೆಲಸವಿಲ್ಲ. ಇದು ರಾಜ್ಯ ಸರ್ಕಾರದ ಹೊಸ ಘೋಷ ವ್ಯಾಕ್ಯವಾಗಿದೆ. ಸರ್ಕಾರ ಕೆಲಸ ದೇವರ ಕೆಲಸ ಅಂತಾ ವಿಧಾನ ಸೌಧ ಮೇಲೆ ಹಾಕಿದ್ದಾರೆ. ಅದನ್ನು ತೆಗೆದು ಹಾಕಿ ಹಣ ಕೊಟ್ರೆ ಕೆಲಸ, ಹಣವಿಲ್ಲ ಅಂದರೇ ಬರಬೇಡಿ ಅಂತ ಹಾಕಲಿ. ಕಾಂಗ್ರೆಸ್ ಶಾಸಕರೇ ಸರ್ಕಾರದ ವೈಖರಿ‌ ಬಗ್ಗೆ ಟೀಕೆ ಮಾಡುತಿದ್ದಾರೆ. ಸಿಎಂ ಅವರ ಆರ್ಥಿಕ ಸಲಹೆಗಾರರು, ರಾಜಕೀಯ ಕಾರ್ಯದರ್ಶಿ, ಹಿರಿಯ ಶಾಸಕರೇ ಹೇಳಿದ್ದಾರೆ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು. ಜನರೇ ಪ್ರತಿಭಟಿಸುತ್ತಾರೆ

ಕೂಡಲೇ ಸಿಎಂ ಈ ಬಗ್ಗೆ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆದೇಶಿಸಲಿ. ಹಿಂದಿನ ಸರ್ಕಾರದ ಬಗ್ಗೆ ತನಿಖೆ ಮಾಡಿಸಿದ ಹಾಗೇ ಈಗಲು ಮಾಡಲಿ.ಸರ್ಕಾರ ವಿರುದ್ಧ ವಿಪಕ್ಷವಾಗಿ‌ ನಾವು ಪ್ರತಿಭಟನೆ ಮಾಡುತ್ತೇವೆ. ಜನರಿಗೆ ಈ ಬಗ್ಗೆ ಅರ್ಥವಾಗಲಿ, ಆಗ ಜನರೇ ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಇಳಿಯುತ್ತಾರೆ ಎಂದರು.ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಬಾಗೆಪಲ್ಲಿ ಸಹಾಯಕ ಕೃಷಿ ನಿರ್ದೇಶಕ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿರುವ ಘಟನೆ. ಅದೇ ರೀತಿ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಕಚೇರಿಯಲ್ಲಿ ಅಧ್ಯಕ್ಷರಿಗೆ ಒಂದು ಎಕರೆ ಭೂಮಿ ಪರಿವರ್ತನೆಗೆ 25 ಲಕ್ಷ ರೂಪಾಯಿಗಳ ಲಂಚ ನೀಡಬೇಕಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಾವು ಶುದ್ದ ಹಸ್ತರು ಎಂದು ಹೇಳುತ್ತಾರೆ. ಜಿಲ್ಲೆಯ ಎಲ್ಲಾ ಕ್ರಷರ್ ಗಳಿಂದಲೂ ಪ್ರತಿ ತಿಂಗಳು ಮಾಮೂಲಿ ಹೋಗುತ್ತಿದ್ದು ಕ್ರಷರ್ ಮಾಲಿಕರು ಬಹಳ ತೊಂದರೆಗೊಳಗಾಗಿದ್ದಾರೆ ಎಂದು ಆರೋಪಿಸಿದರು.

ಸಂಸದರಿಗೆ 45 ಅರ್ಜಿ ಸಲ್ಲಿಕೆ

ಇಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 45 ಅರ್ಜಿಗಳು ಸಂಸದರಿಗೆ ಸಲ್ಲಿಕೆಯಾಗಿದ್ದು, ಕೆಲವೊಂದು ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮುಖೇನ ಚರ್ಚಿಸಿದ ಸಂಸದರು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು. ಉಳಿಕೆ ಅರ್ಜಿಗಳಿಗೆ ಸಂಬಂದಿಸಿದಂತೆ ಪತ್ರದ ಮುಖೇನ ಸಂಬಂಧಿಸಿದ ಇಲಾಖಾ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ.

ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜಶೇಖರ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು.ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ