ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಭಾರತದ ಬದ್ಧತೆಯನ್ನು ಬಲಪಡಿಸಲು ಜಾಗೃತಿ ಮೂಡಿಸಲು ರಾಷ್ಟ್ರೀಯ ಸುರಕ್ಷತಾ ದಿನವು ಬಹಳ ಮಹತ್ವದ್ದಾಗಿದೆ ಎಂದು ಚಿಕ್ಕನರಗುಂದ ಸಪಪೂ ಕಾಲೇಜಿನ ಉಪನ್ಯಾಸಕ ಫಕೀರೇಶ ಅಂಗಡಿ ಹೇಳಿದರು.
ನರಗುಂದ: ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಭಾರತದ ಬದ್ಧತೆಯನ್ನು ಬಲಪಡಿಸಲು ಜಾಗೃತಿ ಮೂಡಿಸಲು ರಾಷ್ಟ್ರೀಯ ಸುರಕ್ಷತಾ ದಿನವು ಬಹಳ ಮಹತ್ವದ್ದಾಗಿದೆ ಎಂದು ಚಿಕ್ಕನರಗುಂದ ಸಪಪೂ ಕಾಲೇಜಿನ ಉಪನ್ಯಾಸಕ ಫಕೀರೇಶ ಅಂಗಡಿ ಹೇಳಿದರು.
ಅವರು ತಾಲೂಕಿನ ಅರಿಷಣಗೋಡಿ ಗ್ರಾಮದಲ್ಲಿ ಶ್ರೀ ಯಡಿಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಈಜಿ ದಡ ಸೇರಬೇಕಾದರೆ ಯುವಕರಲ್ಲಿ ಕೇವಲ ಗುರಿ ಮುಖ್ಯವಲ್ಲ ಛಲ ಬಿಡದೆ, ಕಲಿಕಾ ಹಂಬಲದೊಂದಿಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಇಂದಿನ ಯುವಕರು ಆಧುನಿಕತೆಗೆ ಮಾರು ಹೋಗಿದ್ದಾರೆ. ಇದರ ಪ್ರಭಾವದಿಂದ ಕೌಟುಂಬಿಕ ಸ್ಥಿತಿಗತಿಗಳು ಬದಲಾಗಿವೆ. ಶಕ್ತಿಯುತ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವವಾದದ್ದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಕರೆಯನ್ನು ಸ್ವಚ್ಛತೆಗೊಳಿಸಿದರು. ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಹಿರೇಮಠ, ಎನ್.ವಿ. ಮೇಟಿ, ನಾಗರಾಜ ಮುಳ್ಳೂರ, ಸಂಗೀತ ಕುರಿ, ವಿದ್ಯಾ ಬಡಿಗೇರ, ಮೇಘ ಗೌಡರ, ಭರತ ಬುಡನ, ವೈಷ್ಣವಿ ಹೊಸಳ್ಳಿ, ಪ್ರವೀಣ್ ಚಲವಾದಿ, ಗ್ರಾಮದ ಪ್ರಮುಖ ಗಣ್ಯ ವ್ಯಕ್ತಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.