ಕನ್ನಡಪ್ರಭ ವಾರ್ತೆ ಚಾಮರಾಜನಗರ
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಚಾಮರಾಜನಗರದ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಸಾಮಾಜಿಕ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತ್, ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ-೨೦೨೬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೈವಿಕ ಇಂಧನ ಸಸ್ಯಗಳನ್ನು ರೈತರು ಬೆಳೆಸುವುದರಿಂದ ರೈತರು ತಮ್ಮ ಕೃಷಿ ವ್ಯವಸ್ಥೆಯಲ್ಲಿ ಸಸ್ಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹವಾಮಾನ ವೈಪರೀತ್ಯಕ್ಕೆ ಪೆಟ್ರೋಲಿಯಂ ಇಂಧನದ ವಿವೇಚನ ರಹಿತ ಬಳಕೆ ಕಾರಣವಾಗಿದ್ದು,ಜೈವಿಕ ಇಂಧನ ಸಸ್ಯಗಳಲ್ಲಿ ಹಲವು ಔಷಧೀಯ ಗುಣಗಳು ಕೂಡ ಇದ್ದು ಇವುಗಳ ಬಳಕೆ ಮಾನವನ ಆರೋಗ್ಯ ನಿರ್ವಹಣೆಯಲ್ಲೂ ಕೂಡ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಪ್ರಸ್ತುತ ಮಾಲಿನ್ಯ ಹೆಚ್ಚುತ್ತಿದ್ದು ಹವಾಮಾನ ವೈಪರೀತ್ಯದಿಂದ ಹಲವಾರು ಪ್ರಾಕೃತಿಕ ವಿಕೋಪಗಳು, ದುಷ್ಪರಿಣಾಗಳು ಘಟಿಸುತ್ತಿದ್ದು ಸಮತೋಲನ ಕಾಯ್ದುಕೊಳ್ಳಲು ಪೆಟ್ರೋಲಿಯಂ ಇಂಧನಗಳ ಬಳಕೆ ಕಡಿಮೆ ಮಾಡಿ ಜೈವಿಕ ಇಂಧನಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್, ಜೈವಿಕ ಇಂಧನ ಸಸಿಗಳು ಮತ್ತು ಇತರ ಅರಣ್ಯ ಸಸಿಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಆವರಣದಲ್ಲಿ ಕಾರ್ಯಕ್ರಮದ ನಿಮಿತ್ತ ಕಿಸಾನ್ ಸಮೃದ್ಧಿ ತಾಂತ್ರಿಕ ಜೈವಿಕ ಉತ್ಪನ್ನಗಳಾದ ಹೊಂಗೆ ಹಿಂಡಿ, ಬೇವಿನ ಹಿಂಡಿ, ಹೊಂಗೆ ಎಣ್ಣೆ, ಬೇವಿನ ಎಣ್ಣೆ, ಬಯೋ ಡೀಸೆಲ್, ಉಪ ಉತ್ಪನ್ನಗಳಾದ ದೀಪದ ಎಣ್ಣೆ, ಜೈವಿಕ ಸಾಬೂನು ಮತ್ತು ಜೈವಿಕ ಇಂಧನ ಸಸ್ಯಗಳು ಇವುಗಳನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ೪೦ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.