ಹುಬ್ಬಳ್ಳಿ:
ಇಲ್ಲಿನ ಸೇವಾ ಭಾರತಿಯಲ್ಲಿ ಉತ್ತರ ಕರ್ನಾಟಕ, ಸೇವಾ ಭಾರತೀಯ ವಿದ್ಯಾವಿಕಾಸ ಪ್ರಕಲ್ಪದ ಅಡಿಯಲ್ಲಿ ಹಿಂದುಳಿದ ಬಸ್ತಿಗಳ ಮಕ್ಕಳ ಉಚಿತ ಮನೆ ಪಾಠ ಕಾರ್ಯಕ್ರಮದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದೂಷಿ ಹೇಮಾ ವಾಘಮೊಡೆ ಮಾತನಾಡಿ, ಸಂಸ್ಕಾರ, ವಿದ್ಯೆ ಮತ್ತು ವಿನಯ ಈ ಮೂರನ್ನು ಮಿಳಿತಗೊಳಿಸಿ ವಿದ್ಯಾವಿಕಾಸ ಪ್ರಕಲ್ಪ ಕೆಲಸ ಮಾಡುತ್ತಿದೆ. ಇದರಿಂದ ಸೌಲಭ್ಯ ವಂಚಿತ ಹಿಂದುಳಿದ ಬಸ್ತಿಗಳ ಮಕ್ಕಳು ಉತ್ತಮ ಮನೆಪಾಠ ಪಡೆದು ಯೋಗ್ಯ ಶಿಕ್ಷಣ ಪಡೆಯಲು ಸಹಾಯವಾಗುತ್ತಿದೆ. ನಾವೆಲ್ಲ ತನು-ಮನ-ಧನದಿಂದ ಪಾಲ್ಗೊಂಡು ದೇಶದ ಯಾವುದೇ ಮಗು ಶಿಕ್ಷಣ ಸೌಲಭ್ಯ ವಂಚಿತರಾಗದಂತೆ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಮಕ್ಕಳು, 100ಕ್ಕೂ ಹೆಚ್ಚು ಶಿಕ್ಷಕಿಯರು ಮತ್ತು ಪಾಲಕರು ಪಾಲ್ಗೊಂಡಿದ್ದರು. ಸೇವಾ ಭಾರತೀಯ ಅಧ್ಯಕ್ಷ ಪೂರ್ಣಚಂದ್ರರಾವ್ ಘಂಟಸಾಲ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಪ್ರಾಂತದ ಆರ್‌ಎಸ್‌ಎಸ್ ಪ್ರಮುಖ ಶ್ರೀಧರ ನಾಡಗೇರ, ರತ್ನಾ ಮಾತಾಜಿ, ವಿಜಯ ಕುಮಾರ ಶೆಟ್ಟರ್, ವಿದ್ಯಾವಿಕಾಸದ ರಾಜ್ಯಕಾರ್ಯದ ಶೇಷ ರಾಚಯ್ಯ ವಾರಿಕಲ್ಮಠ, ಗೋಪಾಲ ಮಗಜಿಕೊಂಡಿ, ಶಿಲ್ಪಾ ಶೆಟ್ಟರ್, ಉದ್ಯಮಿಗಳಾದ ಮಹಾದೇವ ಕರಮರಿ, ನಂದಕುಮಾರ ಸೇರಿ ಹಲವರಿದ್ದರು. ಆದಿತ್ಯ ನಂದಕುಮಾರ ವಂದಿಸಿದರು.