ಕಾಡಾನೆ ಮಾನವ ಹೊಂದಾಣಿಕೆಗಾಗಿ ಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : Feb 14, 2026, 02:00 AM IST
13ಎಚ್ಎಸ್ಎನ್9 :  ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಉತ್ತೊಳಲು ಎಸ್ಟೇಟಿನ ಆವರಣದಲ್ಲಿ ಕಾಡಾನೆ-ಮಾನವ ಹೊಂದಾಣಿಕೆಗಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಕಾಫಿ ತೋಟದ ಮಾಲೀಕರು, ಕಾರ್ಮಿಕರು ನಮ್ಮೊಂದಿಗೆ ಸಹಕರಿಸಿ ಎಂದು ಡಿಎಫ್‌ಓ ಸೌರಭ್ ಕುಮಾರ್‌ ತಿಳಿಸಿದರು. ತೋಟ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಮೊದಲು ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ನಿಮ್ಮ ಬಳಿ ಇ.ಟಿ.ಎಫ್ ತುರ್ತು ಸಹಾಯವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು, ಒಂದು ವೇಳೆ ನಿಮ್ಮ ಪರಿಸರದಲ್ಲಿ ಕಾಡು ಪ್ರಾಣಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಬ್ಬಂದಿಗಳಿಗೆ ತಿಳಿಸಬೇಕು ಎಂದು ನೆರೆದಿದ್ದ ಕಾರ್ಮಿಕರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಕಾಫಿ ತೋಟದ ಮಾಲೀಕರು, ಕಾರ್ಮಿಕರು ನಮ್ಮೊಂದಿಗೆ ಸಹಕರಿಸಿ ಎಂದು ಡಿಎಫ್‌ಓ ಸೌರಭ್ ಕುಮಾರ್‌ ತಿಳಿಸಿದರು.ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಉತ್ತೊಳಲು ಎಸ್ಟೇಟಿನ ಆವರಣದಲ್ಲಿ ನೇಚರ್‌ ಕನ್ಸರ್ವೇಷನ್ ಫೌಂಡೇಶನ್ ಮೈಸೂರು ಹಾಗೂ ಅರಣ್ಯ ಇಲಾಖೆಯ ಸಂಯುಕಾಶ್ರಯದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಆನೆ ಮತ್ತು ಜನರ ಹೊಂದಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ನಿಮ್ಮೆಲ್ಲರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ಕಳೆದುಕೊಂಡ ಪ್ರಾಣ ಮತ್ತೆಂದೂ ಸಿಗದು ಹಾಗಾಗಿ ನಮ್ಮ ಜೀವ ಕಾಪಾಡಿಕೊಳ್ಳಲು ನಾವು ಜಾಗೃತಿ ಹೊಂದುವುದು ಅವಶ್ಯಕ. ಒಂದಿಷ್ಟು ಹಣ ಸಂಪಾದಿಸಲು ಊರು ಬಿಟ್ಟು ಇಲ್ಲಿಗೆ ವಲಸೆ ಬಂದಿದ್ದೀರಾ, ನಿಮ್ಮ ಪ್ರಾಣ ನಮಗೂ ಮುಖ್ಯ, ಹಾಗಾಗಿ ತೋಟ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಮೊದಲು ಕಾಡಾನೆಗಳ ಚಲನ ವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು, ನಿಮ್ಮ ಬಳಿ ಇ.ಟಿ.ಎಫ್ ತುರ್ತು ಸಹಾಯವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು, ಒಂದು ವೇಳೆ ನಿಮ್ಮ ಪರಿಸರದಲ್ಲಿ ಕಾಡು ಪ್ರಾಣಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಬ್ಬಂದಿಗಳಿಗೆ ತಿಳಿಸಬೇಕು ಎಂದು ನೆರೆದಿದ್ದ ಕಾರ್ಮಿಕರಿಗೆ ಸಲಹೆ ನೀಡಿದರು.ನಂತರ ಕಾಡುಪ್ರಾಣಿಗಳು ಕಾಡನ್ನು ತೊರೆದು ಊರಿಗೆ ಬರಲು ಕಾರಣಗಳೇನು? ಕಾಡು ಪ್ರಾಣಿಗಳಿಂದ ಹೇಗೆ ರಕ್ಷಿಸಿಕೊಳ್ಳುವುದು? ಕಾಡಾನೆಗಳನ್ನು ಕಂಡೊಡನೆ ಹೇಗೆ ಎಚ್ಚರವಹಿಸಬೇಕು ಮತ್ತು ಕಾಡಾನೆ ಮಾನವ ಸಂಘರ್ಷ ನಿಯಂತ್ರಿಸಲು ಅರಣ್ಯ ಇಲಾಖೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿವೆ ಎಂಬುವುದರ ಬಗ್ಗೆ ಎ.ಐ ಆಧಾರಿತ ವಿಡಿಯೋ ಪ್ರದರ್ಶನ ಹಾಗೂ ಬೀದಿ ನಾಟಕದ ಮೂಲಕ ನೆರೆದಿದ್ದವರಿಗೆ ಜಾಗೃತಿ ಮೂಡಿಸಲಾಯಿತು.ಈ ವೇಳೆ ಎನ್.ಸಿ.ಎಫ್ ನ ಹಿರಿಯ ವಿಜ್ಞಾನಿ ಆನಂದ್ ಕುಮಾರ್, ಕ್ಷೇತ್ರ ಸಂಯೋಜಕ ದೀಪಕ್ ಭಟ್, ಯೋಜನಾ ಸಂಯೋಜಕ ನಿಸಾರ್‌ ಅಹಮದ್, ಎ.ಸಿ.ಎಫ್ ಮೋಹನ್ ಹಾಗೂ ಮಧುಸೂದನ್, ಆರ್‌ಎಫ್‌ಒ ಯತೀಶ್, ಪೃಥ್ವಿ ಟ್ರಸ್ಟಿನ ಯೋಗನಂದ, ಮಾದೇಸ್ವಾಮಿ, ಜಾಗೃತಿ ಕುಮಾರ್, ಸ್ವಪ್ನ, ಸಿಂಚನ, ಅನುಶ್ರೀ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷಭೇದ ಮರೆತು ಸಮುದಾಯಕ್ಕೆ ಶ್ರಮಿಸಬೇಕು: ಆರ್.ಅಶೋಕ್
ಕಾಡು ಬಸವೇಶ್ವರ ಶ್ರೀ ಆಂಜನೇಯ ದೇವಾಲಯ ಜೀರ್ಣೋದ್ಧಾರ