ನದಿ ತಿರುವು ಯೋಜನೆ ವಿರೋಧಿಸಿ ಜಾಗೃತಿ ಜಾಥಾಕ್ಕೆ ಚಾಲನೆ

KannadaprabhaNewsNetwork |  
Published : Feb 03, 2026, 02:30 AM IST
ಫೋಟೊಪೈಲ್- ೨ಎಸ್ಡಿಪಿ೨- ತಾಲೂಕಿನ ಗೋಳಿಮಕ್ಕಿಯಲ್ಲಿ ಜರುಗಿದ ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನಡೆದ ಜಾಗೃತ ಸಭೆಯಲ್ಲಿ ಪಾಲ್ಗೊಂಡ ಹೋರಾಟಗಾರರು. | Kannada Prabha

ಸಾರಾಂಶ

ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ತಾಲೂಕಿನಾದ್ಯಂತ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ತಾಲೂಕಿನ ಗೋಳಿಮಕ್ಕಿಯಲ್ಲಿ ಬೃಹತ್ ಸಭೆ ಮತ್ತು ಪಾದಯಾತ್ರೆ ಮೂಲಕ ಸೋಮವಾರ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ತಾಲೂಕಿನಾದ್ಯಂತ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ತಾಲೂಕಿನ ಗೋಳಿಮಕ್ಕಿಯಲ್ಲಿ ಬೃಹತ್ ಸಭೆ ಮತ್ತು ಪಾದಯಾತ್ರೆ ಮೂಲಕ ಸೋಮವಾರ ಚಾಲನೆ ದೊರೆಯಿತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಗೋಳಿಮಕ್ಕಿಯಲ್ಲಿ ಬೃಹತ್ ಬಹಿರಂಗ ಸಭೆ ಹಾಗೂ ಸಭೆಯ ನಂತರ ಬಾಳೆಕೊಪ್ಪ ಗ್ರಾಮದ ಅಘನಾಶಿನಿ ಹರಿಯುವ ಗೇಜ್‌ಕಟ್ಟ ನದಿಯವರೆಗೆ ಪಾದಯಾತ್ರೆ ಸಂಘಟಿಸಲಾಗಿತ್ತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತಾಲೂಕಿನ ವಿವಿಧ ೧೨೩ ಗ್ರಾಮಗಳಲ್ಲಿ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಿದೆ. ಅಘನಾಶಿನಿ ನದಿ ಜೋಡಣೆಯಿಂದ ಮಲೆನಾಡು ಮತ್ತು ಕರಾವಳಿ ಭಾಗದ ನೈಸರ್ಗಿಕ ಜೀವನದ ವ್ಯವಸ್ಥೆ ನಶಿಸುವುದಲ್ಲದೇ, ನದಿ ಜೋಡಣೆಯ ಅವೈಜ್ಞಾನಿಕ ಯೋಜನೆಯೆಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ನಾಗಪತಿ ಗೌಡ ಹುಕ್ಕಳ್ಳಿ ಪ್ರಸ್ತಾವಿಸಿದರು. ಸಾರ್ವಜನಿಕ ಸಭೆಯಲ್ಲಿ ಹಿರಿಯ ಚಿಂತಕರಾದ ಎನ್.ವಿ. ಹೆಗಡೆ ಮುತ್ತಿಗೆ, ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಮ್.ಎಲ್. ಭಟ್ ಮಹಿಳಾ ಧುರೀಣರಾದ ವೀಣಾ ಗೌಡ ಅನಲೇಬೈಲ್, ಶ್ಯಾಮಲಾ ಗೌಡ ಬಿದ್ರಖಾನ, ಪದ್ಮಾವತಿ ಗೌಡ ತಂಡಾಗುಂಡಿ, ಎಸ್.ಆರ್. ಹೆಗಡೆ ಕುಂಬಾರಕುಳಿ, ಅಬ್ದುಲ್ ಶರೀಪ್ ಹೇರೂರು, ಜುಬೇರ್ ಸಾಬ, ರಾಜೇಶ್ ಭಟ್ ಮಕ್ಕಿಗದ್ದೆ, ಪರಿಸರ ವಿಜ್ಞಾನಿ ಬಾಲಚಂದ್ರ ಹೆಗಡೆ, ರಾಜಾರಾಮ್ ನಾಯ್ಕ ಕಿರಕೋಡ, ಕೆ.ಟಿ. ನಾಯ್ಕ ಹೆಗ್ಗೇರಿ ಸೀತಾರಾಮ ಗೌಡ ಹುತ್ಗಾರ, ಮಂಜುನಾಥ ಹೆಗಡೆ ಮಾತನಾಡಿದರು.

ಚಂದ್ರಶೇಖರ ಗೌಡ ಸ್ವಾಗತಿಸಿದರು. ಮಂಜುನಾಥ ನಾಯ್ಕ ಹೊಂಡಗದ್ದೆ ನಿರೂಪಿಸಿದರು. ಕೆ.ಟಿ. ನಾಯ್ಕ ಕ್ಯಾದಗಿ ವಂದಿಸಿದರು.

ವೇದಿಕೆ ಮೇಲೆ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಗೋವಿಂದ ಗೌಡ ಕಿಲವಳ್ಳಿ, ದಿವಾಕರ್ ನಾಯ್ಕ ಬಾಳೆಜಡ್ಡಿ, ಕೆ.ಟಿ. ನಾಯ್ಕ ಹೇರೂರು, ಆರ್.ಟಿ. ನಾಯ್ಕ, ಬಿ.ಡಿ. ನಾಯ್ಕ ಕುರಗೇತೋಟ, ಸುಬಾನ್ ಸಾಬ ಅರೆಂದೂರು, ದಿನೇಶ್ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖಂಡ, ಎಮ್. ಎಸ್. ಭಟ್ ಕೆರೆಹೊಂಡ, ಚಂದ್ರಕಾಂತ್ ನಾಯ್ಕ ಗುಲ್ಲುಮನೆ, ಸುಧಾಕರ್ ಮಡಿವಾಳ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಮಂಜುನಾಥ ಹೆಗಡೆ ಗುಂಜಗೋಡ, ರಾಮಕೃಷ್ಣ ನಾಯ್ಕ, ಶುಭಾ ರಮೇಶ್ ಭಟ್, ಶಿವಾನಂದ ನಾಯ್ಕ, ಸುನಿಲ್ ನಾಯ್ಕ, ಸುಬ್ರಾಯ ನಾಯ್ಕ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ
ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು