ಕನ್ನಡಪ್ರಭ ವಾರ್ತೆ ಉಡುಪಿ
-----------
ಅಯೋಧ್ಯೆಗೆ ಹೇಮಮಾಲಿನಿ ಭೇಟಿಉಡುಪಿ: ಅಯೋಧ್ಯೆಯಲ್ಲಿ ಶನಿವಾರ ನೃತ್ಯ ಕಾರ್ಯಕ್ರಮ ನೀಡಿದ ಪ್ರಸಿದ್ಧ ನಟಿ, ನೃತ್ಯ ವಿದುಷಿ ಹೇಮಮಾಲಿನಿ ರಾಮಮಂದಿರಕ್ಕೆ ಭೇಟಿ ನೀಡಿ, ರಾಮನ ಉತ್ಸವ ಸೇವೆಯಲ್ಲಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಹಿಂದೆ ಉಡುಪಿಯಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದನ್ನು ಸ್ಮರಿಸಿಕೊಂಡರು.
ದೊಡ್ಡಣ್ಣಗುಡ್ಡೆ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿಯಾಗ ಸಂಪನ್ನ
ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಮಹಾಕಾಳಿ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವಿಪ್ರಮೋತ್ತಮರ ನೇತೃತ್ವದಲ್ಲಿ ನೆರವೇರಿತು.ದೇವಿ ಪ್ರೀತ್ಯಾರ್ಥ ನೆರವೇರಿದ ಈ ಮಹಾನ್ ಯಾಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಕದಳಿಹಣ್ಣನ್ನು ತ್ರಿಮದುರಯುಕ್ತವಾಗಿ ಕಾಳಿಯ ‘ಕ’ಕಾರ ಸಹಸ್ರನಾಮದಲ್ಲಿ ಹೋಮಿಸಿ, ಕಾಳಿ ಅಷ್ಟೋತ್ತರ ನಾಮದಲ್ಲಿ ಅರ್ಚಿಸಿ ಯಾಗ ನೆರವೇರಿಸಲಾಯಿತು.
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಮಹಾ ಅನ್ನಸಂತರ್ಪಣೆ ನೆರವೇರಿತು. ಬಹು ಅಪರೂಪವಾದ ಈ ಯಾಗದಲ್ಲಿ ಕ್ಷೇತ್ರದ ಸಹಸ್ರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.