ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ತಿಪ್ಪಣ್ಣ ಹೂಗಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಬಸವರಾಜ ಗೌನಳ್ಳಿ ಮತ್ತು ದಳದ ವಿಭಾಗ ಸಂಯೋಜಕ ಬಸವರಾಜ ಅವರು ಅಧಿಕೃತ ಆಹ್ವಾನ ನೀಡಿದರು.
ಬಳಿಕ ಮುದ್ನಾಳ ಗ್ರಾಮದಲ್ಲಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ ಅವರು ತಮ್ಮ ಮನೆಯಲ್ಲಿ ಅಯೋಧ್ಯೆಗೆ ಆಹ್ವಾನ ಪಡೆದ ಶ್ರೀಗಳನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಶ್ರೀಗಳು, ಭಾರತ ದೇಶದಲ್ಲಿ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಗತ್ತಿನ 4000 ಸಂತರಿಗೆ ಆಹ್ವಾನಿಸಿರುವುದು, ಅದರಲ್ಲಿ ತಾವು ಒಬ್ಬರಾಗಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಸಂತರ ಪರವಾಗಿ ನಾವು ಭಾಗವಹಿಸಲು ತೆರಳುತ್ತಿದ್ದುದಾಗಿ ತಿಳಿಸಿದರು.
ಅಂಬರೀಷ್ ದೋರನಹಳ್ಳಿ, ಸಾಬು, ಕಿರಣ, ಅಂಜನೇಯ ಬೆಳಗೇರಾ, ಹೊನ್ನಪ್ಪ, ರಫೀಕ್ ಪಟೇಲ, ಸದ್ದಾಂ, ದೇವಿಂದ್ರ, ನಾಗಪ್ಪ, ಹಣಮಂತ, ಶಿವಯೋಗಿ, ಈಶಪ್ಪ, ಸಾಬಣ್ಣ, ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಪದಾಧಿಕಾರಿಗಳಾದ ಬಸವರಾಜ, ಶರಣು ನಾಪೇಟೆ, ಸಾಬಯ್ಯ, ಬಾಬಾ, ರಶೀದ, ಗಣೇಶ ಇತರರಿದ್ದರು.