ಆಯುರ್ವೇದ ವಿಶ್ವದ ಹಳೆಯ ಚಿಕಿತ್ಸಾ ಪದ್ಧತಿ: ಉಜನಿಕೊಪ್ಪ

KannadaprabhaNewsNetwork |  
Published : Nov 22, 2025, 03:00 AM IST
ಮ | Kannada Prabha

ಸಾರಾಂಶ

ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ಚಿಕಿತ್ಸಾ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಭಾರತದಲ್ಲಿ 5 ಸಾವಿರ ವರ್ಷಗಳ ಹಿಂದೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಿಜೆಪಿ ಮುಖಂಡ ಪರಶುರಾಮ ಉಜನಿಕೊಪ್ಪ ಅಭಿಪ್ರಾಯ ಪಟ್ಟರು.

ಬ್ಯಾಡಗಿ: ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ಚಿಕಿತ್ಸಾ ವ್ಯವಸ್ಥೆಗಳಲ್ಲಿ ಒಂದಾಗಿದ್ದು, ಭಾರತದಲ್ಲಿ 5 ಸಾವಿರ ವರ್ಷಗಳ ಹಿಂದೆ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಿಜೆಪಿ ಮುಖಂಡ ಪರಶುರಾಮ ಉಜನಿಕೊಪ್ಪ ಅಭಿಪ್ರಾಯ ಪಟ್ಟರು. ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಆಯುಷ್) ವಿಭಾಗ ಆಯುಷ್ ಮಂತ್ರಾಲಯ, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಕಾರ‍್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿ ಔಷಧಗಳ ಭಂಡಾರವೇ ಅಡಗಿದೆ. ಎಂತಹ ರೋಗಕ್ಕೂ ಇದರಲ್ಲಿ ಉಪಯುಕ್ತ ಔಷಧಿಯಿದೆ, ದೇಹ, ಮನಸ್ಸು ಮತ್ತು ಆತ್ಮದ ಸಮತೋಲನದ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ ಎಂದರು.ಡಾ. ಮೃತ್ಯುಂಜಯ ಹಿರೇಮಠ ಮಾತನಾಡಿ, ಆಯುರ್ವೇದವು ದೇಹವನ್ನು ಗುಣಪಡಿಸಲು ನೈಸರ್ಗಿಕ ಗಿಡಮೂಲಿಕೆಗಳು, ಎಣ್ಣೆಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಬಳಸುತ್ತದೆ, ಇದು ರೋಗ ಲಕ್ಷಣಗಳನ್ನು ಮಾತ್ರವಲ್ಲದೆ ಅನಾರೋಗ್ಯದ ಮೂಲ ಕಾರಣವನ್ನು ಪರಿಗಣಿಸುತ್ತದೆ, ರೋಗಗಳು ಬರುವ ಮೊದಲು ಅವುಗಳನ್ನು ತಡೆಗಟ್ಟಲು ಇದು ದೈನಂದಿನ ದಿನಚರಿ (ದಿನಚರ್ಯೆ) ಹಾಗೂ ಕಾಲೋಚಿತ ದಿನಚರ್ಯೆಗಳನ್ನು (ಋತುಚರ್ಯೆ) ಒತ್ತಿ ಹೇಳುತ್ತದೆ ಎಂದರು.ಡಾ. ಕೀರ್ತನ ಮಾತನಾಡಿ, ಆಧುನಿಕ ಔಷಧಗಳ (ಅಲೋಪಥಿಕ್) ಬಳಕೆಯಿಂದ ಮನುಷ್ಯ ಪ್ರಾಣ ರಕ್ಷಣೆ ಸಾಧ್ಯ ಆದರೂ ಸಹ ಇವುಗಳಿಂದ ಉಂಟಾಗುವ ಅಡ್ಡ ಪರಿಣಾಮಗಳು ಜೀವ ಹಾನಿಗಿಂತ ಅಧಿಕ ಸಮಸ್ಯೆ ತಂದೊಡ್ಡುತ್ತಿವೆ. ಆದ್ದರಿಂದ ಎಲ್ಲರಿಗೂ ಆಯುರ್ವೆದದ ಬಗ್ಗೆ ತಿಳಿಸುವ ಅಗತ್ಯವಿದೆ ಎಂದರು.ಕಾರ್ಯಗಾರದಲ್ಲಿ ಶೈಲೇಶಕುಮಾರ ಬೂದಿಹಾಳಮಠ, ಉಜಿರೆಯ ಎಸ್‌ಡಿಎಂ ಪ್ರಕೃತಿಕ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವೈದ್ಯಕೀಯ ವಿದ್ಯಾರ್ಥಿ ಡಾ. ವಿಕಾಸ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಜಿ.ಬಿ. ಆಡರಕಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ