ಕಾಡು ಉಳಿಸಿಕೊಂಡು ಆಯುರ್ವೇದ ಸಸ್ಯಗಳ ರಕ್ಷಿಸಬೇಕು

KannadaprabhaNewsNetwork |  
Published : Nov 06, 2023, 12:45 AM IST
ಫೋಟೊ:೦೫ಕೆಪಿಸೊರಬ-೦೨ : ಸೊರಬ ತಾಲೂಕಿನ ಉದ್ರಿ ಗ್ರಾಮದ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ| ಮಹೇಶ್ ಮಾತನಾಡಿದರು. | Kannada Prabha

ಸಾರಾಂಶ

ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ

ಕನ್ನಡಪ್ರಭ ವಾರ್ತೆ ಸೊರಬ

ಮಲೆನಾಡು ಪಶ್ಚಿಮ ಘಟ್ಟದಲ್ಲಿನ ಅತ್ಯಮೂಲ್ಯ ಗಿಡಮೂಲಿಕೆಗಳು ಕಣ್ಮರೆಯಾಗುತ್ತಿವೆ. ಅಳಿದುಳಿದ ಕಾನು ಪ್ರದೇಶವನ್ನು ರಕ್ಷಿಸುವ ಮೂಲಕ ಆಯುರ್ವೇದ ಗುಣವುಳ್ಳ ಮರ-ಗಿಡಗಳನ್ನು ಸಂರಕ್ಷಿಸಬೇಕಿದೆ ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ತಾಲೂಕಿನ ಉದ್ರಿ ಗ್ರಾಮದ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಇಂದು ಮೂಲ ಸೆಲೆಯಾದ ಭಾರತವಲ್ಲದೇ ಇತರೇ ದೇಶಗಳಲ್ಲಿಯೂ ಆಯುರ್ವೇದ ಚಿಕಿತ್ಸೆ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಡು ಪ್ರದೇಶವನ್ನು ಉಳಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಈ ಮೂಲಕ ಪರಿಸರ ಸಮತೋಲನವನ್ನೂ ಸಹ ಕಾಯ್ದುಕೊಳ್ಳಬೇಕಿದೆ. ಕಿರಿಯ ಪ್ರದೇಶದಲ್ಲಿ ಹಿರಿದಾದ ಮಾಹಿತಿ ನೀಡುವ ಮೂಲಕ ವನೌಷಧ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಉದ್ರಿ ಆಯುಷ್ ಆಸ್ಪತ್ರೆ ಮಾದರಿಯಾಗಿದೆ ಎಂದರು.

ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ, ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ. ಈ ಬಾರಿ ಪ್ರತಿದಿನ ಪ್ರತಿ ಮನೆಯಲ್ಲೂ ಆಯುರ್ವೇದ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಔಷಧಿಗಳು, ಚಿಕಿತ್ಸಾ ಪದ್ಧತಿಗಳು, ಔಷಧಿ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಡಿಎಫ್‌ಒ ಸಂತೋಷ್‌ಕುಮಾರ್ ಆಯುರ್ವೇದ ದಿನಾಚರಣೆಗೆ ಚಾಲನೆ ನೀಡಿದರು. ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಪ್ರೊ. ಬಿ.ಎಂ. ಕುಮಾರಸ್ವಾಮಿ, ಜೀವವೈವಿಧ್ಯ ಮಂಡಳಿಯ ಅಧಿಕಾರಿ ಪವಿತ್ರ, ಪ್ರಸನ್ನ, ಕೆ. ವೆಂಕಟೇಶ್, ಎಂ.ಆರ್. ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರದೀಪ್‌ಕುಮಾರ್, ಪರಿಸರ ಕಾರ್ಯಕರ್ತ ಶ್ರೀಪಾದ್ ಬಿಚ್ಚುಗತ್ತಿ, ವಲಯ ಅರಣ್ಯ ಅಧಿಕಾರಿ ಜಾವೇದ್ ಭಾಷಾ, ಅರಣ್ಯ ರಕ್ಷಕ ರಾಘವನ್, ಪಿಡಿಒ ಹೋಮೇಶಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಅನೆಗುಳಿ ಸುಬ್ರಾವ್, ಹಾರೋಗೊಪ್ಪ ಅನಂತರಾಮ್, ಕರವೇ ಅಧ್ಯಕ್ಷ ಬಲಿಂದ್ರಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಉದ್ರಿ ಗ್ರಾಮಸ್ಥರು ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಇದ್ದರು.

- - - -05ಕೆಪಿಸೊರಬ02:

ಸೊರಬ ತಾಲೂಕಿನ ಉದ್ರಿ ಗ್ರಾಮದ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ| ಮಹೇಶ್ ಮಾತನಾಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ