ಕನ್ನಡಪ್ರಭ ವಾರ್ತೆ ಮಂಗಳೂರು
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯುಷ್ ಪದ್ಧತಿಗಳನ್ನು ಆರೋಗ್ಯ ಕ್ಷೇತ್ರದ ಪ್ರಧಾನವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ.ಇದರಿಂದಾಗಿ ಆಯುಷ್ ಪದ್ಧತಿಗಳು ವಿಶ್ವದಾದ್ಯಂತ ಜನಮಾನಸದಲ್ಲಿ ವಿಶ್ವಾಸ ಮೂಡಿಸುತ್ತಿದೆ. ಆಯುಷ್ ಹಬ್ಬ2026 ರಲ್ಲಿ ಹೃದಯದ ಆರೋಗ್ಯ ರಕ್ಷಣೆಗಾಗಿ ಆದ್ಯತೆನೀಡಿ ಹೃದಯ ರೋಗ ತಜ್ಞರಿಂದ ತಪಾಸಣೆ ಹಾಗೂ ಆಯುಷ್ ವೈದ್ಯ ಪದ್ಧತಿಗಳ ಆಹಾರ, ವಿಹಾರ,ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೊದಲಾದ ಸರಳ ವಿಧಾನಗಳ ಮೂಲಕ ರೋಗ ಬರದಂತೆ ತಡೆಯುವ ಕ್ರಮ ಮತ್ತು ಚಿಕಿತ್ಸಾ ಮಾರ್ಗೋಪಾಯಗಳ ಮಾಹಿತಿ ನೀಡುವ ಉತ್ತಮ ಕಾರ್ಯಕ್ರಮ ಇದಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಆಯುಷ್ ಹಬ್ಬಕ್ಕೆ ಭೇಟಿ ನೀಡಲು ಕರೆಯಿತ್ತರು.ಈ ಸಂದರ್ಭದಲ್ಲಿ ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಮಾಲಾಡಿ, ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ, ಡಾ. ದೇವದಾಸ್ ಪುತ್ರನ್, ಡಾ.ಪ್ರತಿಭಾ ರೈ ಇದ್ದರು.
---------------