ಸೋಮವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್‌

KannadaprabhaNewsNetwork |  
Published : Jul 04, 2024, 01:04 AM ISTUpdated : Jul 04, 2024, 12:58 PM IST
ಗುರುಮಠಕಲ್ ಪಟ್ಟಣದ ನಮ್ಮ ಕ್ಲಿನಿಕ್ ನಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಪ್ರಕೃತಿ ನೀಡಿದ ಅನೇಕ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯವೂ ಒಂದು. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮಿತ್ರ ಕಾರ್ತಿಕಗೌಡ ಹೇಳಿದರು.

 ಗುರುಮಠಕಲ್ :  ಪ್ರಕೃತಿ ನೀಡಿದ ಅನೇಕ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯವೂ ಒಂದು. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮಿತ್ರ ಕಾರ್ತಿಕಗೌಡ ಹೇಳಿದರು.

ಗುರುಮಠಕಲ್‌ ಪಟ್ಟಣದ ನಮ್ಮ ಕ್ಲಿನಿಕ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೋಮವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್‌ ಮಾಡಿಕೊಡಲಾಗುತ್ತದೆ. 

ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷದವರೆಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್‌ ಇರುವ ಫಲಾನುಭವಿಗಳಿಗೆ 1.5 ಲಕ್ಷ ವರೆಗೆ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಈ ಆರೋಗ್ಯ ಯೋಜನೆಗಳ ಲಾಭ ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಹೇಳಿದರು. ವೈದ್ಯಾಧಿಕಾರಿ ಡಾ. ಶಿವಪ್ರಸಾದ ಮೈತ್ರಿ, ಯೋಜನಾಧಿಕಾರಿ ಮಂಜುನಾಥ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅಧಿಕಾರಿಗಳಾದ ಲಕ್ಷ್ಮೀ, ಆವಂತಿ, ನರಸಿಂಹಲು, ನಾರಾಯಣಮ್ಮ, ಉಮಾವತಿ ಆವಂತಿ , ಪರಿಮಳಾ, ಬಬಿತಾ, ವೆಂಕಟಮ್ಮ ಇದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಲ್ಕ್‌ಬೋರ್ಡ್‌ ಮೇಲ್ಸೇತುವೆಗೆ ಬಣ್ಣದ ಮೆರಗು ಕೊಟ್ಟ ರಾಮಲಿಂಗಾರೆಡ್ಡಿ
ಕಾಗದ ರಹಿತ ಬಿಲ್‌ ಪಾವತಿ ಜಾರಿ: ಕೃಷ್ಣ