ಕಾರವಾರದಲ್ಲಿ ಅಯ್ಯಪ್ಪ ಮಾಲಾಧಾರಿ ಮೇಲೆ ನೌಕಾನೆಲೆ ಸಿಬ್ಬಂದಿ ಹಲ್ಲೆ

KannadaprabhaNewsNetwork | Published : Jan 14, 2025 1:02 AM

ಸಾರಾಂಶ

ನೌಕಾದಳದ ಸಿಬ್ಬಂದಿ ವರ್ತನೆ ಖಂಡಿಸಿ ತಡರಾತ್ರಿಯೇ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು.

ಕಾರವಾರ: ತಾಲೂಕಿನ ಮುದಗಾ- ಜಡ್ಡಿಗದ್ದೆ ಸಮೀಪ ಅಯ್ಯಪ್ಪ ವ್ರತಾಧಾರಿ ಮೇಲೆ ಅರಗಾ ಕದಂಬ ನೌಕಾನೆಲೆಯ ಸಿಬ್ಬಂದಿ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಭಾನುವಾರ ತಡರಾತ್ರಿ ಸಾರ್ವಜನಿಕರು ಮುದಗಾ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅಮಿತ್ ಖಂಡೇರಿ ಅಪಘಾತ ಪಡಿಸಿ ಜತೆಗೆ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿ ಶ್ರೀನಿವಾಸ ಗಾಯಾಳುವಾಗಿದ್ದಾರೆ.

ಗುರುಸ್ವಾಮಿ ಶ್ರೀನಿವಾಸ ಎನ್ನುವವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ದ್ವಿ ಚಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದ ನೌಕಾನೆಲೆ ಸಿಬ್ಬಂದಿ ಅಮಿತ ಎನ್ನುವವರು ಶ್ರೀನಿವಾಸ ಅವರ ಬೈಕ್‌ಗೆ ಡಿಕ್ಕಿ ಹೊಡೆಸಿದ್ದರಿಂದ ಗಾಯವಾಗಿದ್ದು, ಶ್ರೀನಿವಾಸ್‌ ಅವರು ಇತರೆ ವ್ರತಧಾರಿಗಳಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕಾಗಮಿಸಿದ ಶ್ರೀಕಂಠ, ಮಿಥುನ, ರಾಘವೇಂದ್ರ, ಚಂದ್ರಕಾಂತ ಗುರುಸ್ವಾಮಿ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಪಡಿಸಿದ್ದ ಅಮಿತ್ ೨೦ ಜನರೊಂದಿಗೆ ಆಗಮಿಸಿ ಶ್ರೀನಿವಾಸ ಹಾಗೂ ಇತರರು ಇದ್ದ ವಾಹನವನ್ನು ಮುದಗಾ ಬಳಿ ತಡೆದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ನೌಕಾದಳದ ಸಿಬ್ಬಂದಿ ವರ್ತನೆ ಖಂಡಿಸಿ ತಡರಾತ್ರಿಯೇ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು. ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುತ್ತಿಗೆ ಹಾಕಲು ಯತ್ನ

ಸೋಮವಾರ ಬೆಳಗ್ಗೆ ಕೂಡಾ ಇದೇ ವಿಚಾರವಾಗಿ ಈ ಭಾಗದ ನೂರಾರು ಸಾರ್ವಜನಿಕರು ನೌಕಾನೆಲೆ ಸಿಬ್ಬಂದಿ ವಾಸಿಸುವ ತಾಲೂಕಿನ ಮುದಗಾದ ವಸತಿ ಸಮುಚ್ಛಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ವಸತಿ ಸಮುಚ್ಛಯದ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಅರಣ್ಯ ಹಕ್ಕು ಪುನರ್ ಪರಿಶೀಲನಾ ದಾಖಲೆಯಾಗಿ ಪರಿಗಣಿಸಲು ಮನವಿ

ಮುಂಡಗೋಡ: ಅರಣ್ಯ ಹಕ್ಕು ಕಾಯ್ದೆ ೨೦೦೬ರಡಿ ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆ ಸಮಯದಲ್ಲಿ ಸಾಕ್ಷ್ಯಾಧಾರ ದಾಖಲಾತಿಗಳಾಗಿ ಹಾಗೂ ಹಿರಿಯರ ಹೇಳಿಕೆ ಕೆನರಾ ಗೆಜೆಟಿಯರ್‌ನಲ್ಲಿರುವ ಸಮುದಾಯದ ಹೆಸರು ಉಲ್ಲೇಖವನ್ನು ಪುನರ್ ಪರಿಶೀಲನಾ ದಾಖಲೆಯಾಗಿ ಪರಿಗಣಿಸಬೇಕು ಎಂದು ಅರಣ್ಯ ಅತಿಕ್ರಮಣದಾರರು ಶಿರಸಿ ಸಹಾಯಕ ಆಯುಕ್ತರಾದ ಕಾವ್ಯಾರಾಣಿ ಕೆ.ವಿ. ಅವರಿಗೆ ಮನವಿ ಸಲ್ಲಿಸಿದರು.ಸುದೀರ್ಘ ಚರ್ಚೆಯೊಂದಿಗೆ ನಿಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ವರದಿ ನೀಡುವುದಾಗಿ ಸಹಾಯಕ ಆಯುಕ್ತರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕು ಭೂಮಿ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಸುರೇಶ ಲಮಾಣಿ, ಸುರೇಶ ರಾಠೋಡ, ಹೇಮಲಪ್ಪ ಲಮಾಣಿ, ಸಾವೇರ ಸಿದ್ದಿ, ನಾಗರಾಜ್ ಮಸಳಿಕಟ್ಟಿ, ನೂರಅಹ್ಮದ ಗದಗ, ದೇವು ಪಾಲೆ, ಲೊಕೇಶಗೌಡ, ಮತ್ತು ನಾಗರಾಜ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.

Share this article