ಅಯ್ಯಪ್ಪ ಸ್ವಾಮಿ ಕ್ಷೇತ್ರ ಮಂಡಲ ಪೂಜೋತ್ಸವ ಸಂಪನ್ನ

KannadaprabhaNewsNetwork |  
Published : Dec 29, 2025, 03:15 AM IST
ಪೂಜೋತ್ಸವ | Kannada Prabha

ಸಾರಾಂಶ

ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವ ವಿವಿಧ ಪೂಜಾ ಕೈಂಕರ್ಯಗಳು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವ ವಿವಿಧ ಪೂಜಾ ಕೈಂಕರ್ಯಗಳು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು.

ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಹಾಗೂ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶನಿವಾರ ಪೂರ್ವಾಹ್ನ 6.45 ಕ್ಕೆ ಗಣಪತಿ ಹೋಮದೊಂದಿಗೆ ಪೂರ್ವಾಹ್ನ 7.10 ಗಂಟೆಗೆ ಕನ್ನಿಮೂಲ ಗಣಪತಿಗೆ ಎಳನೀರು ಅಭಿಷೇಕ, 7.30 ಗಂಟೆಗೆ ಚಂಡೆಮೇಳ, 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಅಪರಾಹ್ನ 11.30 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ಪೂಜೆ 12.30 ಗಂಟೆಗೆ ಶ್ರೀಅಯ್ಯಪ್ಪ ಸ್ವಾಮಿಗೆ ಪಲ್ಲಪೂಜೆ ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ, ದೂರ್ವಾರ್ಚನೆ ನಂತರ ಗಂಭೀರ ಪಟಾಕಿ ಸಿಡಿಸಲಾಯಿತು. ದೇವಸ್ಥಾನದ ಅರ್ಚಕ ಗಣೇಶ್ ಉಪಾಧ್ಯಾಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಧ್ಯಾಹ್ನದಿಂದ ಸಂಜೆ 4 ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ಪುಟ್ಟ, ಉಪಾಧ್ಯಕ್ಷರಾದ ಎಂ.ಮಂಜುನಾಥ್, ಬಿ.ಎ.ಪುನೀತ್, ಬಿ.ಕೆ.ಪ್ರಶಾಂತ್ ಕುಮಾರ್, ಬಿ.ಎಲ್.ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಸಹ ಕಾರ್ಯದರ್ಶಿ ರಾಜು ವಿ.ಕೆ. ಕನಿಸ್.ಕೆ, ಮಣಿಕಂಠ, ಖಜಾಂಜಿ ಎಂ.ಆರ್.ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಪಿ.ಆರ್.ಬಿಜುಕುಮಾರ್, ಪೃಥ್ವಿರಾಜ್, ಡಿ.ಕೆ.ರಾಕೇಶ್, ಶೇಖರ್(ಅಣ್ಣು), ಎಂ.ಉದಯ, ಕೆ.ರವಿ, ಬಿ.ಪಿ.ಸಜಿತ್, ಕೆ.ಕೆ.ವಾಸು, ಸುನಿಲ್ ಸಿ.ಸಿ., ಗೌರವಾಧ್ಯಕ್ಷರಾದ ಕೆ.ಎ.ಬಾಲಕೃಷ್ಣ (ಗುರುಸ್ವಾಮಿ), ಮುತ್ತಯ್ಯ, ಸುರೇಶ್ ಗೋಪಿ, ಧನುಕಾವೇರಪ್ಪ, ಸಲಹಾ ಸಮಿತಿ ಸದಸ್ಯರಾದ ವಿ.ಎ.ಸಂತೋಷ್, ದಿನುದೇವಯ್ಯ, ಸಿ.ಬಿ.ಚಂದ್ರಶೇಖರ್, ಪಿ.ಲೋಕೇಶ್, ಕೆ.ಪಿ.ವಿನೋದ್, ಎ.ಶ್ರೀಧರ್ ಕುಮಾರ್, ಅನೂಪ್ ಕುಮಾರ್, ಎ.ಶ್ರೀಧರನ್, ಶಿವಮಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಸುಬ್ರಮಣಿ, ಕೆ.ರವಿ, ಉಮೇಶ್, ಬಿ.ಆರ್.ಸತೀಶ್, ಬಸವರಾಜ್, ದೊರೆ, ಆರ್ ವಿಜಯ, ಚಂದ್ರ, ದಿನೇಶ್ ಬಿ.ಕೆ, ಆರ್.ಪ್ರಶಾಂತ್, ಶಬರಿಮಲೈ ಆಡಳಿತ ಮಂಡಳಿಯವರಾದ ಗೋಕುಲ್‌ಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!
ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।