ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಮೇಲ್‌ಶಾಂತಿಗಾಗಿ ಕಾರ್ಯ ನಿರ್ವಹಿಸಿರುವ ವಿ.ಎನ್. ವಸುದೇವನ್ ನಂಬುದರಿ ಹಾಗೂ ಸಂಗಡಿಗರು ಮತ್ತು ದೇವಾಲಯದ ಅರ್ಚಕರಾದ ಅಕ್ಷಯಭಟ್ ಇವರಿಂದ ಬೆಳಗ್ಗೆ ೫ ಗಂಟೆಗೆ ಶ್ರೀ ಮಹಾಗಣಪತಿ ಹೋಮ, ಪೂಜೆ ನಂತರ ಶ್ರೀ ಅಯ್ಯಪ್ಪಸ್ವಾಮಿಗೆ ಅಭಿಷೇಕ ಸೇವೆ, ಅಲಂಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಜರುಗಲಿವೆ. ಸಂಜೆ ಗೋದೂಳಿ ಲಗ್ನದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ದಿವ್ಯವಾದ ೧೮ ಮೆಟ್ಟಿಲುಗಳ ವಿಶೇಷ ಪಡಿ ಪೂಜೆ, ಪುಷ್ಪಪೂಜೆ, ಅಷ್ಟಾಂಗ ಪೂಜೆ ನೆರವೇರಲಿದೆ. ನಂತರ ಇರುಮುಡಿ ಹೊತ್ತ ಮಾಲಾಧಾರಿಗಳಿಂದ ೧೮ ಮೆಟ್ಟಿಲುಗಳನ್ನು ಹತ್ತಿ ಶ್ರೀ ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಲಿದೆ. ಶನಿವಾರ ಮಂಡಲ ಪೂಜಾ ಮಹೋತ್ಸವದಲ್ಲಿ ಮಾಲೆ ಧರಿಸಿ, ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ನಂತರ ಇರುಮುಡಿ ಕಟ್ಟಿಸಿ ಕೊಂಡು, ಸಂಜೆ ಪಡಿ ಪೂಜಾ ಮಹೋತ್ಸವ ನಂತರ ಇರುಮುಡಿ ಹೊತ್ತು ಶ್ರೀ ಸ್ವಾಮಿಯವರ ದಿವ್ಯದರ್ಶನವನ್ನು ಪಡೆದು ಭಾನುವಾರ ಬೆಳಗ್ಗೆ ತುಪ್ಪಾಭಿಷೇಕ ನೆರವೇರಿಸಿಕೊಂಡು ಶ್ರೀ ಸ್ವಾಮಿಯವರ, ಕೃಪೆಗೆ ಪಾತ್ರರಾಗಲು ಇಚ್ಛಿಸುವವರು ಟ್ರಸ್ಟ್‌ನ ಖಜಾಂಚಿ ಎಚ್.ಎಸ್.ಸುದರ್ಶನ್, ಅರ್ಚಕರಾದ ಅಕ್ಷಯಭಟ್ ಹಾಗೂ ಗುರುಸ್ವಾಮಿಗಳು ಮತ್ತು ಟ್ರಸ್ಟ್‌ನ ಸದಸ್ಯರುಗಳನ್ನ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.