ಬಿ-ಆರ್ಕಿಟೆಕ್ಚರ್ ಮತ್ತು ಬಿ- ಪ್ಲ್ಯಾನಿಂಗ್ ಫಲಿತಾಂಶ: ಎಕ್ಸ್‌ಪರ್ಟ್ ವಿದ್ಯಾರ್ಥಿ ರೆಹಾನ್ ಮೊಹಮ್ಮದ್‌ಗೆ ೭ನೇ ರ್‍ಯಾಂಕ್

KannadaprabhaNewsNetwork |  
Published : May 29, 2025, 01:12 AM ISTUpdated : May 29, 2025, 01:13 AM IST
ರೇಹನ್‌ ಮೊಹಮ್ಮದ್‌ | Kannada Prabha

ಸಾರಾಂಶ

ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್ ಜೆಇಇ ಮೈನ್‌ನ ಬಿ- ಪ್ಲ್ಯಾನಿಂಗ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭ನೇ ರ್‍ಯಾಂಕ್ ಹಾಗೂ ಬಿ - ಆರ್ಕಿಟೆಕ್ಚರ್‌ನಲ್ಲಿ ೧೬೫ನೇ ರ್‍ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್ ಜೆಇಇ ಮೈನ್‌ನ ಬಿ- ಪ್ಲ್ಯಾನಿಂಗ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭ನೇ ರ್‍ಯಾಂಕ್ ಹಾಗೂ ಬಿ - ಆರ್ಕಿಟೆಕ್ಚರ್‌ನಲ್ಲಿ ೧೬೫ನೇ ರ್‍ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.ದೇಶದಲ್ಲಿರುವ ಎನ್‌ಐಟಿಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್‌ನ ಪ್ರವೇಶಕ್ಕಾಗಿ ನಡೆದ ಪರೀಕ್ಷೆ ಇದಾಗಿದ್ದು, ಜೆಇಇ ಮೈನ್‌ನ ಬಿ -ಪ್ಲ್ಯಾನಿಂಗ್‌ನಲ್ಲಿ ಶೈವಿ ಕೆ.ಎಚ್. ೨೭೭ನೇ ರ್‍ಯಾಂಕ್, ವಿಹಾನ್ ಪೂಜಾರಿ ೬೫೧ನೇ ರ್‍ಯಾಂಕ್, ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್ ೧೩೬೭ನೇ ರ್‍ಯಾಂಕ್, ಡಿ.ಚಿನ್ಮಯ ಗೌಡ ೨೧೦೯ನೇ ರ್‍ಯಾಂಕ್ (ಕ್ಯಾಟಗರಿಯಲ್ಲಿ ೫೭೫ನೇ ರ್‍ಯಾಂಕ್), ಅಮೃತ ಸಂತೋಷ ಜಕಾತಿ ೬೪೧೯ನೇ ರ್‍ಯಾಂಕ್, ಪ್ರಿಯಾಂಕಾ ಯಲಮೇಲಿ ೭೪೨೩ನೇ ರ್‍ಯಾಂಕ್, ಅನನ್ಯ ಎನ್. ೮೯೧೩ನೇ ರ್‍ಯಾಂಕ್, ವ? ಎಸ್. ೯೦೫೨ನೇ ರ್‍ಯಾಂಕ್, ಕೆ.ಪಿ. ಹರ್ಷಿಣಿ ೯೬೦೭ನೇ ರ್‍ಯಾಂಕ್, ಕ್ಯಾಟಗರಿ ವಿಭಾಗದಲ್ಲಿ ಹೃಷಿಕಾ ನಾಯಕ್ ಎಸ್. ೩೩೭ನೇ ರ್‍ಯಾಂಕ್, ಪೂರ್ವಾ ಸಿ. ೬೯೫ನೇ ರ್‍ಯಾಂಕ್ ಪಡೆದಿದ್ದಾರೆ.ಬಿ -ಪ್ಲ್ಯಾನಿಂಗ್‌ನಲ್ಲಿ ಸೃಷ್ಟಿ ಎ.ಪಾಟೀಲ್ ೨೫೩೭ನೇ ರ್‍ಯಾಂಕ್, ವರ್ಷಾ ಎಸ್. ೩೩೧೦ನೇ ರ್‍ಯಾಂಕ್, ಅಪೂರ್ವ ನಾಯ್ಕವಾಡಿ ೪೨೦೦ನೇ ರ್‍ಯಾಂಕ್, ಕಿರಣ ಯಲಗೊಂಡ ಸುರಗಿಹಳ್ಳಿ ೭೮೭೭ನೇ ರ್‍ಯಾಂಕ್, ಶ್ರೀ ಆರ್.ಟಿ. ೮೦೯೪ನೇ ರ್‍ಯಾಂಕ್, ಸುಪ್ರಿತ್ ಸುನಿಲ್ ಬ್ಯಾಡಗಿ ೮೬೭೧ನೇ ರ್‍ಯಾಂಕ್ (ಕ್ಯಾಟಗರಿ ವಿಭಾಗದಲ್ಲಿ ೨೯೫೩ನೇ ರ್‍ಯಾಂಕ್), ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್ ೯೫೬೨ನೇ ರ್‍ಯಾಂಕ್ (ಕ್ಯಾಟಗರಿ ವಿಭಾಗದಲ್ಲಿ ೩೨೯೧ನೇ ರ್‍ಯಾಂಕ್) ಪಡೆದಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''