ಬಿ. ಬಾಬು ಹೋರಾಟ ಸ್ಮರಣೀಯ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Dec 30, 2025, 03:00 AM IST
ಕಾರ್ಯಕ್ರಮವನ್ನು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಚಂದ್ರು ಉದ್ಘಾಟಿಸಿದರು. | Kannada Prabha

ಸಾರಾಂಶ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಚಂದ್ರು ಮಾತನಾಡಿ, ಅಕ್ಷರದಾಸೋಹದ ಬಿಸಿಯೂಟ ತಯಾರಿಕರಿಗೆ ತೊಂದರೆಯಾದಾಗ ಬಿ. ಬಾಬು ಹೋರಾಟಕ್ಕೆ ಮುಂದಾಗುತ್ತಿದ್ದರು. ಅಂತಹ ನಿಷ್ಠಾವಂತ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವುಂಟು ಮಾಡಿದೆ ಎಂದರು.

ಮುಂಡರಗಿ: ಪಟ್ಟಣದಲ್ಲಿ ಬಿ. ಬಾಬು ಎಂದೇ ಖ್ಯಾತರಾಗಿದ್ದ ಗೈಬುಸಾಬ್ ಬಳಬಟ್ಟಿ ಅವರು ಸಾಕ್ಷರತಾ ಆಂದೋಲನ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಂಗಭೂಮಿ, ಸಾಹಿತ್ಯ, ಪತ್ರಕರ್ತ ಹೀಗೆ ಹತ್ತಾರು ಆಯಾಮಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಸ್ಮರಿಸಿದರು.

ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಬಿ. ಬಾಬು ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಂಡರಗಿಯ ಹಿರಿಯ ರಂಗಭೂಮಿ ಕಲಾವಿದ ಬಿ. ಬಾಬು ಬಿಸಿಯೂಟ ಯೋಜನೆ ಪ್ರಾರಂಭವಾದಾಗಿನಿಂದಲೂ ನಿರಂತರವಾಗಿ ಅಡುಗೆ ಕಾರ್ಮಿಕರ ಪರವಾಗಿ ತಮ್ಮ ಪ್ರಾಮಾಣಿಕ ಪ್ರೀತಿ ಮತ್ತು ಕಾಳಜಿ ಹೊಂದಿದ್ದರು. ಅಲ್ಲದೇ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಚಂದ್ರು ಮಾತನಾಡಿ, ಅಕ್ಷರದಾಸೋಹದ ಬಿಸಿಯೂಟ ತಯಾರಿಕರಿಗೆ ತೊಂದರೆಯಾದಾಗ ಬಿ. ಬಾಬು ಹೋರಾಟಕ್ಕೆ ಮುಂದಾಗುತ್ತಿದ್ದರು. ಅಂತಹ ನಿಷ್ಠಾವಂತ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವುಂಟು ಮಾಡಿದೆ ಎಂದರು.

ಅರುಣೋದಯ ಕಲಾ ತಂಡದ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ಆದರ್ಶದ ಮಾತುಗಳನ್ನು ಹೇಳುವುದು ಸುಲಭ. ಅದರಂತೆ ನಡೆದುಕೊಳ್ಳುವುದು ತುಂಬಾ ಕಷ್ಟ. ಆದರೆ ಬಿ. ಬಾಬು ಅವರು ಸಾಮಾಜಿಕ, ಸಾಂಸ್ಕೃತಿಕವಾಗಿ ಬೆಳೆಯುವುದರ ಜತೆಗೆ ಇತರರನ್ನು ಬೆಳೆಸುವ ಪ್ರಯತ್ನ ಮಾಡಿದರು ಎಂದರು.

ಬಿಸಿಯೂಟ ತಯಾರಕರ ಸಂಘದ ತಾಲೂಕು ಅಧ್ಯಕ್ಷೆ ಶಾಂತಾ ನಾಯಕ ಅಧ್ಯಕ್ಷತೆ ವಹಿಸಿದ್ದರು. ಜಾವೇದ ಬಳಬಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜಶೇಖರ ಹಿರೇಮಠ, ದ್ಯಾಮಣ್ಣ ಮಡಿವಾಳರ, ಅಕ್ಕಮ್ಮ ಹಡಪದ, ರುದ್ರಮ್ಮ ಬಳಿಗಾರ, ಅನುಸೂಯಾ, ಸರೋಜಮ್ಮ, ಮುತ್ತು ಹಾಳಕೇರಿ, ಸಿ.ಕೆ. ಗಣಪ್ಪನವರ ಸೇರಿದಂತೆ ನೂರಾರು ಜನ ಬಿಸಿಯೂಟ ತಯಾರಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ