ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ತಂದೆ ಹೆಸರಿನಲ್ಲಿ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳು ಗೆಲುವು- ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು, ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸುವೆ, ಸೋತ ತಂಡ ಮುಂದಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಗೆಲ್ಲುವಂತಾಗಲಿ, ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ .
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮರಣಾರ್ಥ ಕೊಳ್ಳೇಗಾಲ ಕ್ಷೇತ್ರದ ಕುದೇರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಮರವಾಡಿ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಬಿ.ರಾಚಯ್ಯ ಸೀಸನ್ 2 ಟ್ರೋಫಿ ತನ್ನದಾಗಿಸಿಕೊಂಡಿತು. ಬಾಗಳಿ ತಂಡವು ರನ್ನರ್ ಅಪ್ ಆಯಿತು.ಈ ವೇಳೆ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ,
ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ತಂದೆ ಹೆಸರಿನಲ್ಲಿ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳು ಗೆಲುವು- ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು, ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸುವೆ, ಸೋತ ತಂಡ
ಮುಂದಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಗೆಲ್ಲುವಂತಾಗಲಿ, ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ ಎಂದರು.
ನಮ್ಮ ತಂದೆ ಬಿ. ರಾಚಯ್ಯ ಅವರು ಈ ಭಾಗದಲ್ಲಿಯೇ ಅಧ್ಯಯನ ಮಾಡಿದವರು. ಅವರಿಗೂ ಕ್ರೀಡೆಗಳ ಪ್ರೋತ್ಸಾಹಿಸುವಿಕೆಯಲ್ಲಿ
ಹೆಚ್ಚಿನ ಆಸಕ್ತಿ ಇತ್ತು. ಅದೇ ರೀತಿ ನಾನು ಸಹಾ ಕ್ರೀಡಾಭಿಮಾನಿ, ವಿದ್ಯಾರ್ಥಿ ದೆಸೆಯಲ್ಲಿ ನಾನು ಸಹ ಹಲವು ಕ್ರೀಡಾಕೂಟಗಳಲ್ಲಿ ಕ್ರೀಡಾ ನಾಯಕನಾಗಿದ್ದೆ ಎಂದರು.
ಈ ವೇಳೆ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್, ಜಿಪಂನ ಮಾಜಿ ಉಪಾಧ್ಯಕ್ಷ ಯೋಗೀಶ್, ರೇವಣ್ಣ ಕಮರವಾಡಿ,
ಶಾಸಕ ಎ.ಆರ್. ಕೃಷ್ಣಮೂರ್ತಿಯವರು ಕ್ರೀಡಾಪ್ರೇಮಿಯಾಗಿದ್ದು, ಕ್ರೀಡಾಭಿಮಾನಿಗಳ ಪ್ರೋತ್ಸಾಹಕ್ಕಾಗಿ ಉತ್ಸುಕರಾಗಿದ್ದಾರೆ. ಸಜ್ಜನ ರಾಜಕಾರಣಿಗಳು, ಅವರೊಬ್ಬ ಸೌಮ್ಯ ಸ್ವಭಾವಿ, ಕ್ಷೇತ್ರದ ಅಭಿವೃದ್ದಿ ಪರ ಹೆಚ್ಚು ಕಾಳಜಿ ವಹಿಸುತ್ತಿರುವ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಲಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.