ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಿಕಟ ಪೂರ್ವ ಅಧ್ಯಕ್ಷ ಪುಟ್ಟರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಪಂಚಾಯ್ತಿಯ ಒಟ್ಟು 26 ಸದಸ್ಯರಲ್ಲಿ ಚುನಾವಣಾ ಸಭೆಗೆ 24 ಮಂದಿ ಹಾಜರಾಗಿದ್ದರು.
ಬಿ.ರವಿಕುಮಾರ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ, ತಾಪಂ ಇಒ ವೇಣು ಘೋಷಣೆ ಮಾಡಿದರು. ಪಂಚಾಯ್ತಿ ಕಾರ್ಯದರ್ಶಿ ವೆಂಕಟರಾಮು ಚುನಾವಣಾ ಸಹಾಯಕರಾಗಿದ್ದರು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ವಿ.ಸುರೇಶ್, ಪುಟ್ಟರಾಜು, ಸದಸ್ಯರಾದ ಅರವಿಂದ್, ರಜಿನಿಕಾಂತ್, ಶಿವಕುಮಾರ್, ಕೃಷ್ಣ, ನಾಗಣ್ಣ, ಆರ್ಮುಗಂ ಕಾಂತ್ ರಾಜು, ಪ್ರಭಾ ಸುರೇಶ್, ಅಶ್ವಿನಿ ರವಿಕುಮಾರ್ ರಾಧ ಬಿಎಂ ಸಸ್ವಾಮೀಗೌಡ, ವಿಷಕಂಠೇಗೌಡ ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.ಡಾ.ಬಿ.ಬಿ.ಪ್ರವೀಣ್ ಕುಮಾರ್ ಅಧಿಕಾರ ಸ್ವೀಕಾರ
ಪಟ್ಟಣದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತಾಲೂಕು ಸಹಾಯಕ ನಿರ್ದೇಶಕರಾಗಿ ಡಾ.ಬಿ.ಬಿ. ಪ್ರವೀಣ್ ಕುಮಾರ್ ಬುಧವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ ಪ್ರವೀಣ್ ಕುಮಾರ್ ಅವರನ್ನು ಅಭಿನಂದಿಸಿದರು.