9ನೇ ಬಾರಿ ಗೆಲುವಿನ ನಗೆ ಬೀರಿದ ಬಿ.ಶಿವಣ್ಣ

KannadaprabhaNewsNetwork |  
Published : Aug 25, 2025, 01:00 AM IST
 ಫೋಟೋ ಇದೆ  : 24 ಕೆಜಿಎಲ್ 1 : ಬಿ  ಶಿವಣ್ಣ ಅವರನ್ನ ಸ್ವಾಗತಿಸಿದ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ | Kannada Prabha

ಸಾರಾಂಶ

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕುಣಿಗಲ್ ವೃತ್ತದಿಂದ ಸ್ಪರ್ಧಿಸಿದ್ದ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಬಿ ಶಿವಣ್ಣ ವಿಜೇತರಾಗಿದ್ದು ಕುಣಿಗಲ್ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಣಿಗಲ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕುಣಿಗಲ್ ವೃತ್ತದಿಂದ ಸ್ಪರ್ಧಿಸಿದ್ದ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಬಿ ಶಿವಣ್ಣ ವಿಜೇತರಾಗಿದ್ದು ಕುಣಿಗಲ್ ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ಪಟ್ಟಣದ ಹುಚ್ಚಮಾಸ್ತಿಗೌಡ ಹಾಗೂ ಗ್ರಾಮ ದೇವತೆ ವೃತ್ತದಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳು ಮತ್ತು ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ ಶಿವಣ್ಣ, ಸಹಕಾರ ಕ್ಷೇತ್ರದಲ್ಲಿ ನಾವು ಮಾಡಿರುವ ಸೇವೆಯಿಂದ ಮತ್ತೊಮ್ಮೆ ನಮಗೆ ಅಧಿಕಾರವನ್ನು ಜನ ನೀಡಿದ್ದಾರೆ. ಗ್ರಾಮೀಣ ಜನರ ರೈತರ ಬಡವರ ನಿರ್ಗತಿಕರ ಪರವಾಗಿ ಕೆಲಸ ಮಾಡಲು ಇನ್ನು ಹೆಚ್ಚು ಆಸಕ್ತಿ ಬಂದಿದೆ. ರಾಜಕೀಯ ಬೆಳವಣಿಗೆಯಲ್ಲಿ ಹಲವಾರು ತಂತ್ರಗಾರಿಕೆ ಕುತಂತ್ರಗಾರಿಕೆ ಮಾಡಿದರೂ ಸಹ ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿ ಇನ್ನು ಹೆಚ್ಚಿನ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು. ಈ ವೇಳೆ ಮಾಜಿ ಸಚಿವ ಡಿ ನಾಗರಾಜಯ್ಯ, ಡಿ. ಕೃಷ್ಣಕುಮಾರ್‌ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ