ಕನ್ನಡಪ್ರಭ ವಾರ್ತೆ ಸರಗೂರುಪ್ರತ್ಯೇಕ ಪ್ರಕರಣಗಳಲ್ಲಿ ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯ ಕಂದಲಿಕೆ (ತಕ್ಕಲು) ಗ್ರಾಮದಲ್ಲಿ ಮನೆ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಖಚಿತ ಮಾಹಿತಿ ಆಧಾರದಲ್ಲಿ ಗುರುವಾರ ಪೊಲೀಸರು ದಾಳಿ ನಡೆಸಿ, 1.50 ಲಕ್ಷ ರು. ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಗ್ರಾಮದ ರಾಜೇಶ್ ಬಿನ್ ನಿಂಗನಾಯಕ, ರಮೇಶ್ ಬಿನ್ ಬೆಟ್ಟನಾಯಕ ಎಂಬುವರು ಬಂಧಿತ ಆರೋಪಿಗಳು.ಘಟನೆ: ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಗ್ರಾಮಾಂತರ ಜಿಲ್ಲೆ ಅಬಕಾರಿ ಉಪ ಆಯುಕ್ತರು ನಿರ್ದೇಶನದಂತೆ ನಂಜನಗೂಡು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಗುರುವಾರ ಬೆಳಗ್ಗೆ ಏಕಾಏಕಿ ದಾಳಿ ನಡೆಸಿದ ಕೋಟೆ ವಲಯದ ಅಬಕಾರಿ ಪೊಲೀಸರು ಆರೋಪಿಗಳಾದ ರಾಜೇಶ್ ಅವರ ಮನೆಯ ಹಿಂಭಾಗದಲ್ಲಿ ಬೆಳೆಯಲಾದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ 4.665 ಕೆ.ಜಿ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಅದೇ ಗ್ರಾಮದ ರಮೇಶ್ ಎಂಬುವರು ಮನೆಯ ಹಿಂಭಾಗದ ಜಮೀನಿನಲ್ಲಿ ಬೆಳೆಯಲಾದ 17 ಕೆ.ಜಿ. ತೂಕದ 30 ಹಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದು, 1.50 ಲಕ್ಷ ರು. ಬೆಳೆಯುಳ್ಳ ಗಾಂಜಾ ಇದಾಗಿದೆ. ಇಬ್ಬರು ಆರೋಪಿಗಳನ್ನು ದಸ್ತಗಿರಿ ಪಡಿಸಿ ಎನ್ಡಿಪಿಎಸ್ ಕಾಯ್ದೆ ಕಲಂ 8ಬಿ, 20ಎ, 20ಬಿ(1), 25,26ರ ಅಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ದಾಳಿ ವೇಳೆ ಅಬಕಾರಿ ನಿರೀಕ್ಷಕ ಎಸ್. ಶಿವರಾಜು, ಉಪ ನಿರೀಕ್ಷಕ ಅಪ್ಸಲ್, ಮುಖ್ಯಪೇದೆ ಬಿ.ವಿ. ರವಿ, ಸಿಬ್ಬಂದಿಗಳಾದ ಕೃಷ್ಣ, ಬಿಲ್ ಕಲೆಕ್ಟರ್ ಮಹೇಶ್, ಕಂದಾಯ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಇದ್ದರು.