ಕನ್ನಡಪ್ರಭ ವಾರ್ತೆ ಮೈಸೂರುಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಒಂದು ವಿಚಾರಕ್ಕೆ ಬದ್ಧರಾಗಿ ಉಳಿಯುವುದು ಕಷ್ಟ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಹೇಳಿದರು.ಕನ್ನಡ ಸಾಹಿತ್ಯ ಕಲಾಕೂಟ, ಕಾವ್ಯಲೋಕ ಟ್ರಸ್ಟ್ ವತಿಯಿಂದ ಶನಿವಾರ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಏರ್ಪಡಿಸಿದ್ದ ಖ್ಯಾತ ಗಾಯಕ ಬಿ.ಪಿ. ಮಂಜುನಾಥ್ ಅವರಿಗೆ ಗಾನಗಂಧರ್ವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಮಗೆ ದೇಶ ಮುಖ್ಯವಾಗಬೇಕು. ದೇಶಕ್ಕೆ ಋಣಿಯಾಗಿರಬೇಕು. ಸಮಾಜೋದೇವೋಭವ, ರಾಷ್ಟ್ರದೇವೋಭವ ಎನ್ನಬೇಕು. ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಬೇಸರ ಮೂಡಿಸುತ್ತದೆ ಎಂದು ಅವರು ವಿಷಾದಿಸಿದರು.ಆದರೆ 1985 ರಲ್ಲಿ ಬಿಜೆಪಿ ಸೇರಿದ ಮಂಜುನಾಥ್ ಅವರು ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿ, ತಮ್ಮ ನಂಬಿರುವ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಗಾಯನ ಹಾಗೂ ಶ್ಲಾನ ಸಾಕಾಣಿಕೆಯಲ್ಲೂ ಹೆಸರು ಮಾಡಿದ್ದಾರಹೆ ಎಂದರು.ಆರ್ಕೆಸ್ಟ್ರಾ ಮಂಜು ಎಂದೇ ಖ್ಯಾತರಾಗಿದ್ದ ಮಂಜುನಾಥ್ ಅವರು ಕೇವಲ ಚಲನಚಿತ್ರ ಗೀತೆಗಳನ್ನು ಮಾತ್ರವಲ್ಲದೇ ದೇಶಭಕ್ತಿ ಗೀತೆಗಳನ್ನು ಕೂಡ ಹಾಡಿ, ಹಲವಾರು ರಾಜ್ಯ ಮತ್ತು ರಾಷ್ಟ್ರ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕಂಠ ಅಷ್ಟೊಂದು ಅದ್ಭುತವಾಗಿದೆ ಎಂದರು.ಬಿ.ಪಿ. ಮಂಜುನಾಥ್ ಅತ್ಯಂತ ಕಷ್ಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ಸ್ವಂತ ಶ್ರಮದಿಂದಲೇ ಇವತ್ತು ಉದ್ಯಮಿಯಾಗುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಅವರು ಶ್ಲಾಘಿಸಿದರು.2002ರ ನರಸಿಂಹರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದರು. ನಂತರವೂ ಎರಡು ಬಾರಿ ಸ್ಪರ್ಧಿಸಿದ್ದರು. ಆದರೆ ಗೆಲ್ಲಲಾಗಲಿಲ್ಲ. ಆದರೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.ಪ್ರಶಸ್ತಿ ಸ್ವೀಕರಿಸಿದ ಬಿ.ಪಿ. ಮಂಜುನಾಥ್ ಅವರು ಮಾತನಾಡಿ, ಈ ಪ್ರಶಸ್ತಿಯನ್ನು ಸುತ್ತೂರು ಶ್ರೀಗಳಿಗೆ ಅರ್ಪಿಸುತ್ತೇನೆ ಎಂದರು.ಒಮ್ಮೆ ನನ್ನ ಗಾಯನವನ್ನು ಕೇಳಿದ ಶ್ರೀಗಳು ಇದೇ ಕ್ಷೇತ್ರದಲ್ಲಿ ಮುಂದುವರೆಯಿರಿ ಎಂದು ಸೂಚಿಸಿದರು. ಅದರಂತೆ ಮುಂದುವರೆಸಿಕೊಂಡು ಬಂದೆ. ಡಾ.ಲತಾ ರಾಜಶೇಖರ ಅವರ ಶ್ರೀರಾಮದರ್ಶನ- ಮಹಾಕಾವ್ಯ ಬಿಡುಗಡೆ ಸಂದರ್ಭದಲ್ಲಿ ಹಾಡಿದ ''''''''ರಾಮನ ಅವತಾರ ರಘುಕುಲ ಸೋಮನ ಅವತಾರ...'''''''' ಹಾಡು ಅಪಾರ ಮೆಚ್ಚುಗೆಗೆ ಪಾತ್ರವಾಯಿತು ಎಂದರು.ಇದರ ಜೊತೆಗೆ ಕೆನಲ್ ಕ್ಲಬ್ ಅನ್ನು ಸ್ಥಾಪಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗಳನ್ನು ನಡೆಸಿದ್ದೇನೆ. ಶ್ವಾನ ತಳಿ ಬೆಳೆಸುವುದರಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.ರಾಜಕೀಯದಲ್ಲಿ ನನಗೆ ಅದೃಷ್ಟ ಇರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳು ಕೈಹಿಡಿದಿವೆ. ಗುರು- ಗುರಿ- ಪರಿಶ್ತಮದಿಂದ ಈ ಮಟ್ಟಗೆ ಬಂದಿದ್ದೇನೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬಿ.ಪಿ. ಮಂಜುನಾಥ್ ಗಾನ ಹಾಗೂ ಶ್ವಾನಪ್ರಿಯರಾಗಿದ್ದಾರೆ ಹೆಸರು ಮಾಡಿದ್ದಾರೆ ಎಂದರು.ಮುಖ್ಯ ಅತಿಥಿಯಾಗಿದ್ದ ವಕೀಲ ಹರೀಶ್ ಕುಮಾರ್ ಹೆಗ್ಡೆ ಮಾತನಾಡಿ, ಮಂಜುನಾಥ್ ಅವರು ಸಕಲಕಲಾವಲ್ಲಭರರು. ಖ್ಯಾತ ನಟ ಪ್ರಕಾಶ್ ರಾಜ್ ಅವರು ಕೂಡ ಇವರ ಹಾಡುಗಳನ್ನು ಕೇಳಲು ಆಗಾಗ್ಗೆ ಕರೆಸಿಕೊಳ್ಳುತ್ತಾರೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡ ಎಂ.ಬಿ. ಚೇತನ್ ಮುಖ್ಯ ಅತಿಥಿಯಾಗಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾವ್ಯಲೋಕ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್ ಸ್ವಾಗತಿಸಿದರು. ಡಾ.ಲತಾ ರಾಜಶೇಖರ್, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್, ಎ.ಜಿ. ದೇವರಾಜ್, ಮೂಗೂರು ನಂಜುಂಡಸ್ವಾಮಿ, ಡಾ.ವಸಂತಕುಮಾರ್ ತಿಮಕಾಪುರ, ಸಾಲಿಗ್ರಾಮ ತಮ್ಮಯ್ಯ, ಬಿ.ಪಿ. ಮಂಜುನಾಥ್ ಕುಟುಂಬದ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಬಿ.ಪಿ. ಮಂಜುನಾಥ್ ಅವರು ರಾಮನ ಅವತಾರ, ಶಂಕರಾಭರಣಂ ಮತ್ತಿತರ ಗೀತೆಗಳನ್ನು ಹಾಡಿದರು.