- ಬಿ.ವಿ.ಶ್ರೀನಿವಾಸ್ ಹುಟ್ಟು ಹಬ್ಬದ ಪ್ರಯುಕ್ತ ಚಿಟ್ಟಿಕೊಡಿಗೆ ವಿಕಲಚೇತನ ಆಶ್ರಯ ಕೇಂದ್ರಕ್ಕೆ ರೇಷನ್ ಕಿಟ್ ವಿತರಣೆ
ಕಾಂಗ್ರೆಸ್ ಸೇವಾ ದಳದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ತಮ್ಮ ಸಾರ್ವಜನಿಕ ಜೀವನದಲ್ಲಿ ಸೇವೆ ಹಾಗೂ ಸಂಘಟನೆ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ ತಿಳಿಸಿದರು.
ಶನಿವಾರ ಜಿಲ್ಲಾ ಯುವ ಕಾಂಗ್ರೆಸ್ ನಿಂದ ತಾಲೂಕಿನ ವಗಡೆಕಲ್ಲು ಸಮೀಪದ ಚಿಟ್ಟಿ ಕೊಡಿಗೆ ಸೆಂಟ್ ಬೆನೆಡಿಕ್ಟ್ ಬೌದ್ಧಿಕ ವಿಕಲಚೇತನ ಹೆಣ್ಣು ಮಕ್ಕಳ ಆಶ್ರಯ ಕೇಂದ್ರಕ್ಕೆ ರೇಷನ್ ಕಿಟ್ ವಿತರಿಸಿ ಮಾತನಾಡಿದರು. ಬಿ.ವಿ.ಶ್ರೀನಿವಾಸ್ ಕೇವಲ ರಾಜಕೀಯ ನಾಯಕರಾಗಿರದೆ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ದಾವಿಸುವ ಸೇವಾ ಮನೋಭಾವದ ನಾಯಕ ರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ದೇಶದಾದ್ಯಂತ ಆಕ್ಷಿಜನ್, ಆಸ್ಪತ್ರೆಗೆ ಬೆಡ್, ಔಷದಿ ಸೇರಿದಂತೆ ಅಗತ್ಯ ನೆರವು ಒದಗಿಸುವಲ್ಲಿ ಮಂಚೂಣಿಯಲ್ಲಿ ನಿಂತಿದ್ದರು. ಅವರನ್ನು ಆಕ್ಷಿಜನ್ ಮ್ಯಾನ್ ಆಫ್ ಇಂಡಿಯಾ ಎಂದೇ ಜನರು ಗುರುತಿ ಸಿದ್ದಾರೆ. ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾಗೂ ನೆರೆ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭ ದಲ್ಲಿ ಕಾಂಗ್ರೆಸ್ ಸೇವಾ ದಳದ ತಂಡಗಳನ್ನು ಸಂಘಟಿಸಿ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ ಗೌಡ ಅರಗಿ ಮಾತನಾಡಿ, ಯುವ ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರ ಹುಟ್ಟು ಹಬ್ಬವನ್ನು ಸಮಾಜ ಮುಖಿ ಕಾರ್ಯದ ಮೂಲಕ ಆಚರಣೆ ಮಾಡುತ್ತಿದ್ದೇವೆ. ನಾಯಕರು ಎಂದರೆ ಕೇವಲ ಹುದ್ದೆ ಮತ್ತು ಅಧಿಕಾರಕ್ಕೆ ಸೀಮಿತವಾಗಿರದೆ ಸಮಾಜದ ಸಂಕಷ್ಟದಲ್ಲಿರುವವರ ಜೊತೆ ನಿಂತು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ಬಿ.ವಿ.ಶ್ರೀನಿವಾಸ್ ನಿಲುವಾಗಿದೆ. ಮುಂದಿನ ದಿನಗಳಲ್ಲೂ ಯುವ ಕಾಂಗ್ರೆಸ್ ಸಮಾಜ ಮುಖಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು.